ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡಿಗೆ ಕೇರಳ ಸರ್ಕಾರ ಕಳಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಕೃತಿಯನ್ನು ತಿರಸ್ಕರಿಸಿದನ್ನು ಸುಳ್ಯದ ಬಿಲ್ಲವ ಸಮುದಾಯದ ಸದಸ್ಯ ರಂಜಿತ್ ಪೂಜಾರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಭಾರತದ ಮಹಾನ್ ಸಂತರನ್ನು ಕೂಡ ಜಾತೀಯ ತಾರತಮ್ಯದಿಂದ ನೋಡಿದಂತಾಗುತ್ತದೆ, ಹಾಗೂ ಭಾರತೀಯ ಸನಾತನ ಪರಂಪರೆಗೆ ನಾವು ಅಗೌರವ ಮಾಡಿದಂತಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಬ್ರಹ್ಮ ಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇಧರ್ಮ ಒಂದೇ ದೇವರು ಎನ್ನುವ ತತ್ವವನ್ನು ಜಗಕ್ಕೆ ಸಾರಿದ ಪರಮ ಗುರುಗಳು. ಶಂಕರಾಚಾರ್ಯರು ಭೋದಿಸಿದ ಅದ್ವೈತ ವನ್ನು ಸಮಾಜದಲ್ಲಿ ಪ್ರಾಯೋಗಿಕವಾಗಿ ಮಾಡಿ ತೋರಿಸಿದವರು ಬ್ರಹ್ಮ ಶ್ರೀ ನಾರಾಯಣ ಗುರುಗಳು. ಈ ಮಹಾನ್ ಆತ್ಮಜ್ಞಾನಿಗಳ ನಡುವೆ ಅವರು ಹುಟ್ಟಿದ ಕಾರಣದಿಂದ ಭೇಧಮಾಡುವುದು ಖಂಡಿತ ಸರಿಯಲ್ಲ. ಕೋಟ್ಯಾಂತರ ಗುರುದೇವರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಸರಕಾರ ಅಗೌರವ ತೋರಿಸಿರುವುದು ವಿಷಾದನೀಯ ಇದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಕೇಂದ್ರ ಸರಕಾರವು ಈ ಬಗ್ಗೆ ಪುನರ್ಪರಿಶೀಲನೆ ಮಾಡಿ ಗುರುದೇವರ ಪ್ರತಿಮೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇರುವಂತೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ರಂಜಿತ್ ಪೂಜಾರಿ ಸುಳ್ಯ