ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ನಲ್ಲಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೊಬೈಲ್ ಮಳಿಗೆ ‘ಸೃಷ್ಟಿ ಫ್ಯಾನ್ಸಿ’ಯಲ್ಲಿ ಸಾಲು ಸಾಲು ಹಬ್ಬಗಳ ಪ್ರಯುಕ್ತ ಸೃಷ್ ಗ್ರಾಹಕರಿಗೆ ವಿಶೇಷ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮ ಜ. 14 ರಂದು ನಡೆದಿತ್ತು.
ಇದರ ಬಹುಮಾನ ವಿತರಣೆ ಕಾರ್ಯಕ್ರಮ ಜ.17 ರಂದು ನಡೆಯಿತು.
ಪ್ರಥಮ ಬಹುಮಾನ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನದ ಕೀಯನ್ನು ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯ ರವರು ಬಹುಮಾನ ವಿಜೇತ ಸಾಯಿ ಪ್ರಸಾದ್ ಬೆಳ್ಳಾರೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.