ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇತ್ತೀಚೆಗೆ ಅಗಲಿದ ನಿವೃತ್ತ ಸಿ.ಇ.ಒ. ಗುಂಡ್ಯ ಸುಂದರ ಗೌಡ ರವರಿಗೆ ಜ.18 ರಂದು ನುಡಿನಮನ ಸಲ್ಲಿಸಲಾಯಿತು. ಆರಂಭದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಹಾಗೂ ನಿವೃತ್ತ ಸಿ.ಇ.ಒ.ಸುಧಾಮ ಆಲೆಟ್ಟಿ ಯವರು ಮೃತರ ಜೀವನಗಾಥೆಯ ಕುರಿತು ನುಡಿನಮನ ಸಲ್ಲಿಸಿದರು. ನಿರ್ದೇಶಕರಾದ ಸುಧಾಕರ ಆಲೆಟ್ಟಿ, ಸೂರ್ಯನಾರಾಯಣ ನಾಯಕ್ ಅರಂಬೂರು, ಮೇಲ್ವಿಚಾರಕ ಬಾಲಕೃಷ್ಣ ಪುತ್ಯ,ಸಿ.ಇ.ಒ ದಿನಕರ ಮತ್ತು ಸಿಬ್ಬಂದಿ ವರ್ಗದ ವರು, ಸ್ಥಳೀಯರಾದ ಪ್ರಸನ್ನ ಕೆ.ಸಿ.ಬಡ್ಡಡ್ಕ, ಅಣ್ಣಿ ಪೂಜಾರಿ ಮೊರಂಗಲ್ಲು ಉಪಸ್ಥಿತರಿದ್ದರು.