ಪಂಜ ಗ್ರಾಮ ಪಂಚಾಯತ್ ವತಿಯಿಂದ 15 ನೇ ಹಣಕಾಸಿನ ಕ್ರೀಯಾ ಯೋಜನೆಯಲ್ಲಿ 2 ಲಕ್ಷ ರೂ ಮೊತ್ತದ ಅನುದಾನದಲ್ಲಿ ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ದೈವಸ್ಥಾನಕ್ಕೆ ಹೋಗುವ ರಸ್ತೆ ಕಾಂಕ್ರಿಟೀಕರಣ ಕ್ಕೆ ಗುದ್ದಲಿ ಪೂಜೆ ಜ.18 ರಂದು ಜರುಗಿತು ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಡಾ.ರಾಮಯ್ಯ ಭಟ್ ಗುದ್ದಲಿ ಪೂಜೆ ನೆರವೇರಿಸಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಅಧ್ಯಕ್ಷೆ ವಹಿಸಿದ್ದರು.ಗ್ರಾಮ ಪಂಚಾಯತ್ ಸದಸ್ಯರಾದ ಲಿಖಿತ್ ಪಲ್ಲೋಡಿ, ಶ್ರೀಮತಿ ವೀಣಾ ಪಂಜ,ನಾರಾಯಣ ಕೃಷ್ಣನಗರ, ಚಂದ್ರಶೇಖರ ದೇರಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಿನ್ನಪ್ಪ ಗೌಡ ಚೊಟ್ಟೆಮಜಲು , ಲೋಕೇಶ್ ಬರೆಮೇಲು,
ದಾಮೋದರ ಪಲ್ಲೋಡಿ
ಶ್ರೀಮತಿ ನಿರ್ಮಲಾ ಪಲ್ಲೋಡಿ, ಶ್ರೀಮತಿ ಹೇಮಲತಾ ಪಲ್ಲೋಡಿ,ಪ್ರೇಮಾನಂದ ಶೆಟ್ಟಿ ಪಲ್ಲೋಡಿ, ಪ್ರಕಾಶ್ ಜಾಕೆ,ಶೇಷಪ್ಪ ಗೌಡ ಪಲ್ಲೋಡಿ , ಶ್ರೀಮತಿ ಪುಷ್ಪಾವತಿ ಪಲ್ಲೋಡಿ, ರಾಧಾಕೃಷ್ಣ ಪಲ್ಲೋಡಿ, ಶ್ರೀಮತಿ ಹೇಮಾವತಿ ಪಲ್ಲೋಡಿ, ಶ್ರೀಮತಿ ಸವಿತಾ ಪಲ್ಲೋಡಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಲಿಖಿತ್ ಪಲ್ಲೋಡಿ ಸ್ವಾಗತಿಸಿದರು.ಪ್ರಕಾಶ್ ಜಾಕೆ ವಂದಿಸಿದರು.