ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ತಾಲ್ಲೂಕು ಯುವಜನ ಸಂಯುಕ್ತ ಮಂಡಳಿ ಸುಳ್ಯ, ಆದರ್ಶ ಯೂತ್ ಕ್ಲಬ್ ಹಾಲೆಮಜಲು ನಾಲ್ಕೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜ. 18ರಂದು ಹಾಲೆಮಜಲು ಶ್ರೀವೆಂಕಟೇಶ್ವರ ಸಭಾಭವನದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಾಗಾರ ನಡೆಯಿತು.
ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ಉದ್ಘಾಟಿಸಿ, ಶುಭ ಹಾರೈಸಿದರು. ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ದಿನೇಶ್ ಹಾಲೆಮಜಲು ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿಯ ಮೇಲ್ವಿಚಾರಕ ಶಾಂತಪ್ಪರವರು ಆಗಮಿಸಿದ್ದರು. , ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಸತೀಶ್ ಮೂಕಮಲೆ ಮುಖ್ಯ ಅತಿಥಿಯಾಗಿದ್ದರು. ನೆಹರು ಯುವ ಕೇಂದ್ರದ ಸಂಯೋಜಕಿ ಕು. ಪ್ರತಿಭಾ ಕಾಯರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಶ್ರಮ್ ಕಾರ್ಡ್ ವಿತರಣೆ ನಡೆಯಿತು.
ಕ್ಲಬ್ನ ಸದಸ್ಯರು, ಮತ್ತು ಇತರ ಯುವಕ ಮಂಡಲ ಹಾಗೂ ಯುವತಿ ಮಂಡಲಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನವೀನ್ ಗುಡ್ಡೆಮನೆ ಸ್ವಾಗತಿಸಿದರು. ಸುಪ್ರಿತ್ ಗುಡ್ಡೆಮನೆ ವಂದಿಸಿದರು. ಸದಸ್ಯ ಸತೀಶ್ ಬೊಂಬುಳಿ ಕಾರ್ಯಕ್ರಮ ನಿರೂಪಿಸಿದರು.