ಆಲೆಟ್ಟಿ ಗ್ರಾಮದ ಗುಂಡ್ಯ ಮಾಡಾರಮನೆ ಸಪರಿವಾರ ಶ್ರೀ ಉಳ್ಳಾಕುಳು ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ಧರ್ಮನಡಾವಳಿ ನೇಮೋತ್ಸವವು ಫೆ.೦2ರಿಂದ ಫೆ.೦4ರವರೆಗೆ ನಡೆಯಲಿದೆ. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಜ.೨೭ರಂದು ಮುಹೂರ್ತದ ಗೊನೆ ಕಡಿಯುವುದು. ಫೆ.೨ರಂದು ಸಂಜೆ ೬ರಿಂದ ಭಜನಾ ಕಾರ್ಯಕ್ರಮ , ಫೆ.೩ರಂದು ಪೂ.೭ರಿಂದ ಉಗ್ರಾಣ ತುಂಬುವುದು, ತಂತ್ರಿಗಳ ಆಗಮನ, ಗಣಪತಿ ಹವನ, ನವಕ, ನವಕಾಭಿಷೇಕ, ನಾಗತಂಬಿಲ, ಸಪರಿವಾರ ದೈವ ದೇವರುಗಳ ತಂಬಿಲ, ಮಹಾಪೂಜೆಯಾಗಿ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ ೭ರಿಂದ ಶ್ರೀ ಉಳ್ಳಾಕುಳು ಸಪರಿವಾರ ದೈವದ ಭಂಡಾರ ಏರಿ ಧರ್ಮ ನಡಾವಳಿ ನೇಮೋತ್ಸವ, ವಾಲಸರಿ, ಕಿರಿಯರ ನೇಮ, ಹಿರಿಯರ ನೇಮ ನಡೆಯಲಿರುವುದು.ಬಳಿಕ ಶ್ರೀಮುಡಿ ಗಂಧಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ, ಫೆ.೦೪ರಂದು ಪೂ.೯ರಿಂದ ಸಪರಿವಾರ ದೈವಗಳ ನೇಮೋತ್ಸವ, ಶ್ರೀ ಮಲೆ ಚಾಮುಂಡಿ ದೈವ, ಶ್ರೀ ಪುರುಷ ದೈವ, ಶ್ರೀ ಮದಿಮಾಳ್, ಶ್ರೀ ಅಜ್ಜಿ, ಶ್ರೀ ಪೊಟ್ಟನ್ ದೈವ, ಶ್ರೀ ಪಂಜುರ್ಲಿ ದೈವ, ಶ್ರೀ ಕೂಜಿ ದೈವಗಳ ಕೋಲ ನಡೆಯಲಿರುವುದು. ನಂತರ ಪ್ರಸಾದ ವಿತರಣೆಯಾಗಿ ಆಗಮಿಸಿ ದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಗಲಿರುವುದು ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಶೋಕ ಪ್ರಭು ಸುಳ್ಯರು ತಿಳಿಸಿರುತ್