ನಗರದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದೆ..!

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೃಷಿ ಹಾಳುಗೆಡುತ್ತಿದ್ದ ಕೋತಿಗಳು ಮನೆಯೊಳಗೆ ನುಗ್ಗುತ್ತಿವೆ….

 

ಮಂಗಗಳು ತೋಟಕ್ಕೆ ಬಂದು ಕೃಷಿ ಹಾಳು ಮಾಡುವುದು ನಡೆಯುತ್ತಾ ಬರುತ್ತಿವೆಯಾದರೂ ಇದೀಗ ಅವುಗಳ ಕಾಟ ಹೆಚ್ಚಾಗಿದ್ದು ಮನೆಯೊಳಗಡೆ ನುಗ್ಗುತ್ತಿವೆ.


ಸುಳ್ಯ ಕೃಷಿಯನ್ನೆ ಅವಲಂಬಿಸಿಕೊಂಡಿರುವ ತಾಲೂಕು. ತಾಲೂಕಿನಾದ್ಯಂತ‌ ದೊಡ್ಡ ದೊಡ್ಡ ಕಾಡುಗಳು ಇವೆ.‌ ಕೆಲ ವರ್ಷಗಳಿಂದ ಕಾಡಾನೆಗಳ ದಂಡು ನಾಡಿಗೆ ಬರಲಾರಂಬಿಸಿ ಇಲ್ಲಿಯ ಕೃಷಿಕರ ನಿದ್ದೆ ಗೆಡಿಸುತ್ತಿವೆ. ಆನೆಗಳ ದಂಡು ತೋಟಕ್ಕೆ ಒಮ್ಮೆ ಬಂತೆಂದರೆ ತೋಟ ನಾಶವಾದಂತೆ… ಇದರ ಜತೆಗೆ ಮಂಗಗಳು ಕೂಡಾ ತೋಟಕ್ಕೆ ಬಂದು ಕೃಷಿ ಹಾಳು ಮಾಡುತ್ತಿವೆ.

ಸುಳ್ಯ‌ ನಗರದ ಕೃಷಿ‌ ಪ್ರದೇಶದಲ್ಲಿ ಯೂ ಮಂಗಗಳು ಬಂದು ಕೃಷಿಕ ಬೆಳೆದ ಬಾಳೆ, ತೆಂಗು, ಕೊಕ್ಕೊ, ಹಲಸಿನಹಣ್ಣ ಇನ್ನಿತರ ಬೆಳೆಯನ್ನು ತಿಂದು ಕೃಷಿಕನಿಗೆ ದೊರೆಯಂತೆ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಆದರೆ ಇದೀಗ ಮಂಗಗಳು ಗುಂಪು ಗುಂಪಾಗಿ ಸೇರಿಕೊಂಡು ಮನೆಯ ಛಾವಣೆ ಏರಿ‌ ಮನೆಯೊಳಗೆ ನುಗ್ಗಲು ಆರಂಭಿಸಿವೆ. ಮನೆಯ ತಾರಸಿಯ ಮೇಲೆ ಒಣಗಲು ಹಾಕಿದ ವಸ್ತುಗಳನ್ನು, ವಸ್ತ್ರಗಳನ್ನು ಕೊಂಡು ಹೋಗುತ್ತಿವೆ. ಮಕ್ಕಳ ನ್ನು ಬೆದರಿಸುತ್ತಿದೆ.‌ಅವರ ಆಟಿಕೆ ಗಳನ್ನ ಸೆಳೆದು ಚೂರು ಚೂರು ಮಾಡುತ್ತಿದೆ. ನಗರದ ಅಂಬೆಟಡ್ಕ ಮತ್ತಿತರ ಪ್ರದೇಶದಲ್ಲಿ ಕಾಟ ಜೋರಾಗಿದೆ. ಆದ್ದರಿಂದ ಮಂಗಗಳು ನಗರ ಪ್ರದೇಶದಿಂದ ಹೊರ ಓಡಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.