.*ಸುಬ್ರಹ್ಮಣ್ಯ: ಸುಧಾ ಮೂರ್ತಿ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ಮಠದ ಸಹಯೋಗದಿಂದ ಲೋಕಾರ್ಪಣೆ*
ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ದ ನೇತೃತ್ವದಲ್ಲಿ ಸುಧಾಮೂರ್ತಿಯವರು ಕೊಡುಗೆಯಾಗಿ ನೀಡಿದ ಸಕಲ ವ್ಯವಸ್ಥೆಗಳನ್ನು ಹೊಂದಿರುವ ಆಂಬ್ಯುಲೆನ್ಸ್ ಲೋಕಾರ್ಪಣೆ ಜ.20 ರಂದು ನಡೆಯಿತು.
ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದರು. ಈ ಆಂಬ್ಯುಲೆನ್ಸ್ ವಿಶೇಷ ರೀತಿಯಲ್ಲಿ ಕೆಲಸ ಮಾಡಲಿದ್ದು ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ನಿಟ್ಟೆ ಇಲ್ಲಿಂದ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ, ಸಮಾಜ ಸೇವಕ ರವಿಕಕ್ಕೆಪದವು, ಸ್ವಾಮಿ ಸನ್ನಿಧಿ ಮಳಿಗೆಯ ಕಿಶೋರ್ ಅರಂಪಾಡಿ, ಹರೀಶ್ ಇಂಜಾಡಿ, ಲೋಲಾಕ್ಷ ಕೈಕಂಬ, ದಿನೇಶ್ ಮಾಸ್ಟರ್, ಯಜ್ಞೇಶ್ ಆಚಾರ್, ತಾರಾನಾಥ ಪಪ್ಪು ಲೊಕೇಶ್, ಹೇಮಂತ್, ರಹಿಮಾನ್ ಊರಿನ ಪ್ರಮುಖ ಉಪಸ್ಥಿತರಿದ್ದರು.
*ವಿಶೇಷ ವ್ಯವಸ್ಥೆ, ತರಬೇತಿ ಹೊಂದಿದ ಸಿಬ್ಬಂದಿಗಳು, ಮಠದ ಖರ್ಚು*:
ಈ ಆಂಬ್ಯುಲೆನ್ಸ್ ಅತ್ಯಾಧುನಿಕ ವ್ಯವಸ್ಥೆಗಳಿದ್ದು ಇದರಲ್ಲಿ ಡೀಪ್ ಇಂಕ್ಯುಬಲೇಟರ್, ಇನ್ಸುಲೇಟರ್, ವೆಂಟಿಲೇಟರ್, ಆಕ್ಸಿಜನ್, ಮಾನಿಟರ್, ಎಮರ್ಜೆನ್ಸಿ ಡ್ರಗ್ಸ್ ಮತ್ತು ಇ ಸಿ ಜಿ ಯ ವ್ಯವಸ್ಥೆ ಇರುತ್ತದೆ. ಈ ಆಂಬ್ಯುಲೆನ್ಸ್ ನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ದ ಶ್ರೀನಿಕೇತನ ಟ್ರಸ್ಟ್ ಮುಖಾಂತರ ನಿರ್ವಹಣೆ ಮಾಡಲಿದ್ದು ಆಂಬ್ಯುಲೆನ್ಸ್ ನ ಯತ್ರೋಪಕರಣಗಳನ್ನು ನಿರ್ವಹಿಸಲು ಇಬ್ಬರು ನರ್ಸ್ ಗಳಿಗೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ, ಬೆಂಗಳೂರಿನಲ್ಲಿ ತರಬೇತಿ ನೀಡಿದೆ. ಟ್ರಸ್ಟ್ ಮುಖಾಂತರ ಇಬ್ಬರು ನರ್ಸ್, ಓರ್ವ ಚಾಲಕ, ಆಂಬ್ಯುಲೆನ್ಸ್ ಡೀಸೆಲ್ ವೆಚ್ಚ, ನಿರ್ವಹಣಾ ವೆಚ್ಚ ಭರಿಸಲಿದೆ. ಆಂಬ್ಯುಲೆನ್ಸ್ ಉಚಿತ ಸೇವೆ ನೀಡಲಿದ್ದು ಸುಬ್ರಹ್ಮಣ್ಯ ಆಸುಪಾಸಿನ ಎಲ್ಲಾ ಗ್ರಾಮಗಳಿಗೆ ಸುಳ್ಯ ಮತ್ತು ಪುತ್ತೂರು ವರೇಗೆ ಸೇವೆ ದೊರೆಯಲಿದೆ.
. ಆಂಬ್ಯುಲೆನ್ಸ್ ಬೇಕಾಗಿದ್ದಲ್ಲಿ 8277866108, 8481526666 ಸಂಪರ್ಕಿಸಬಹುದು.