ಬೆಳ್ಳಾರೆ ಗ್ರಾಮದ ನೆಟ್ಟಾರು ಚಾವಡಿಬಾಗಿಲು ಮನೆಯ ಶ್ರೀ ಹೊಸಳಿಗಮ್ಮ ಮತ್ತು ಶ್ರೀ ಧರ್ಮದೈವ, ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಜ.20 ಹಾಗೂ ಜ.21 ರಂದು ನಡೆಯಿತು.8
ಜ.20 ರಂದು ಪೂರ್ವಾಹ್ನ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶ, ತಂಬಿಲ ನಡೆದು ಸಂಜೆ ದೈವಗಳ ಭಂಡಾರ ತೆಗೆದು ಆನಂತರ ಜಾವತೆ ದೈವ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಹಾಗೂ ಮೂಕಾಂಬಿಕಾ ಗುಳಿಗ ದೈವದ ನೇಮ ನಡೆಯಿತು.
ಜ.21ರಂದು ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವವು ನಡೆಯಿತು. ಎರಡು ದಿನವೂ ಅನ್ನಸಂತರ್ಪಣೆ ನಡೆಯಿತು. ನೇಮೋತ್ಸವದಲ್ಲಿ ಕುಟುಂಬದವರು ಹಾಗೂ ಊರ-ಪರ ಭಕ್ತರು ಪಾಲ್ಗೊಂಡಿದ್ದರು.