ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಮಾನ್ಯ ನಿರ್ದೇಶಕರ ಸ್ಥಾನಕ್ಕೆ ಜ.31 ರಂದು ಚುನಾವಣೆಯು ನಡೆಯಲಿದ್ದು ಜ.21 ರಂದು ಸಾಮಾನ್ಯ ಸ್ಥಾನಕ್ಕೆ ರಾಧಾಕೃಷ್ಣ ಬೊಳ್ಳೂರು ರವರು ನಾಮ ಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿ ಬಿ. ನಾಗೇಂದ್ರ ರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಮೂಕಮಲೆ, ಪದ್ಮನಾಭ ಬೊಳ್ಳೂರು, ಗಣೇಶ್ ಪಿಲಿಕಜೆ, ಡಿ.ಕೆ.ಸುರೇಶ್, ಪ್ರವೀಣ್ ಎಸ್.ರಾವ್, ಕೇಶವ ಕರ್ಮಾಜೆ, ಅರುಣ್ ಮುಂಡಾಜೆ, ಸೊಸೈಟಿ ಸಿ.ಇ.ಒ.ಮೋಹನ್ ಕುಮಾರ್ ಪೊಯ್ಯೆಮಜಲು ಉಪಸ್ಥಿತರಿದ್ದರು.