ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ೨೦೨೧-೨೨ನೇ ಸಾಲಿನ ಗಣಕಯಂತ್ರ ವಿದ್ಯಾರ್ಥಿ ಸಂಘ CENSAದ ಉದ್ಘಾಟನೆ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ARAMBH ಜ.೧೯ ರಂದು ನಡೆಯಿತು. ಮಂಗಳೂರು MindStack Technologies, CEO, ಚೈತ್ರೇಶ್ ಶೆಣೈ ಇವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಎ. ಜ್ಞಾನೇಶ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಅತಿಥಿಗಳಾದ ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಮೌಲ್ಯಾಧಾರಿತ ಶಿಕ್ಷಣ ಹಾಗೂ ನಾಯಕತ್ವವನ್ನು ಅಳವಡಿಸಿಕೊಳ್ಳಬೇಕೆಂದು ಹಿತವಚನವನ್ನು ನೀಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ| ಉಜ್ವಲ್ ಯು.ಜೆ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೆನ್ಸಾ ಉಪಾಧ್ಯಕ್ಷ ಆದಿತ್ಯ ಬಿ.ಎಸ್. ಸಂಘದ ವರದಿ ವಾಚಿಸಿದರು. ದ್ಯಾನ್ ಟಿ.ಡಿ. ವಂದಿಸಿ, ಕು. ಅಶ್ವಿನಿ ಹೆಚ್.ಕೆ. ಮತ್ತು ಧನ್ಯ ಪಿ.ಆರ್. ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅತಿಥಿಯಾಗಿರುವ ಚೈತ್ರೇಶ್ ಶೆಣೈಯವರು “Corporate Envision” ಎಂಬ ವಿಷಯದ ಬಗ್ಗೆ ತಾಂತ್ರಿಕ ಉಪನ್ಯಾಸವನ್ನು ನೀಡಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಯೋಜಕರುಗಳಾದ ದಿವ್ಯ ಎ.ಕೆ., ಡಾ. ಸವಿತಾ ಸಿ.ಕೆ., ಬಾಲಪ್ರದೀಪ್ ಕೆ.ಎನ್. ಕಾರ್ಯಕ್ರಮವನ್ನು ಸಂಯೋಜಿಸಿದರು. ವಿಭಾಗದ ಎಲ್ಲಾ ಉಪನ್ಯಾಸಕರು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.