ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಸಾರ್ವಜನಿಕ ಸ್ಥಳವಾದ 4 ಬಸ್ ತಂಗು ದಾಣಗಳಲ್ಲಿ ಪುಸ್ತಕ ಗೂಡು ಇಂದು (ಜ.21) ಉದ್ಘಾಟನೆಗೊಂಡಿತು. ಪುಸ್ತಕ ಗೂಡನ್ನು ಮಿತ್ರ ಬಳಗ ಗೋಳಿಯಡ್ಕ, ಮಿನುಂಗೂರು ಬ್ರದರ್ಸ್, ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ, ಹಾಗೂ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ವತಿಯಿಂದ ನಿರ್ಮಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಜಿ. ಪಂ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಗ್ರಂಥಾಲಯ ಮೇಲ್ವಿಚಾರಕಿ ತೇಜಾವತಿ ಹಾಗೂ ಗ್ರಾ. ಪಂ ಸದಸ್ಯರು, ಗ್ರಾ. ಪಂ ಸಿಬ್ಬಂದಿವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.