ಬಳ್ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಮತ್ತು ಪೋಷಕರ ಸಭೆ ಜ.24 ರಂದುಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಬುಡೆಂಗಿ ಯವರ ಅಧ್ಯಕ್ಷತೆಯಲ್ಲಿ
ಜರುಗಿತು. “ಇಂದಿನ ದಿನಗಳಲ್ಲಿ ಯಾವೆಲ್ಲ ಮಾರ್ಗಗಳಿಂದ ಸಾಮಾನ್ಯ ಜನರು ಸೈಬರ್ ಕ್ರೈಮ್ ಗಳಿಗೆ ತುತ್ತಾಗುತ್ತಾರೆ ಹಾಗು ಕ್ರೈಮ್ ಎಸಗುತ್ತಾರೆ “ಎಂಬುದರ ಬಗ್ಗೆ ಎಂಟನೇ ತರಗತಿಯ ವಿದ್ಯಾರ್ಥಿಗಳು ಪೋಷಕರಲ್ಲಿ ಜಾಗೃತಿ ಮೂಡಿಸಿದರು. ಶಾಲಾ ಗೋಡೆಪತ್ರಿಕೆ ನಮ್ಮೂರ ಸುದ್ಧಿಯಲ್ಲಿ ವಿಶೇಷ ಸಂಚಿಕೆಯನ್ನು ಹೊರತರುವ ಮೂಲಕ ವಿವಿಧ ಮಾರ್ಗಗಳಿಂದ ನಡೆಯುವ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಇರುವ ದಿನಪತ್ರಿಕೆಗಳನ್ನು ಕತ್ತರಿಸಿ ಅಂಟಿಸುವ ಮೂಲಕ ಪೋಷಕರಿಗೆ ಓದಲು ತಿಳಿಸಿದರು ಹಾಗೂ ಇದೇ ಸಮಯದಲ್ಲಿ ಎಲ್ಲಾ ಮಕ್ಕಳು ಸೈಬರ್ ಜಾಗೃತಿ ಮೂಡಿಸುವ ಘೋಷಣೆಗಳನ್ನು ಓದಿದರು.ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.