ಜ. 26ರಿಂದ‌ ಜ. 29: ಅಯ್ಯನಕಟ್ಟೆ ಜಾತ್ರೋತ್ಸವ ಜ. 25: ಹಸಿರು ಕಾಣಿಕೆ ಮೆರವಣಿಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಇದರ ಆಶ್ರಯದಲ್ಲಿ ನಡೆಯುವ ಅಯ್ಯನಕಟ್ಟೆ ಜಾತ್ರೋತ್ಸವವು ಜ. 26ರಂದು ಮೊದಲ್ಗೊಂಡು ಜ. 29ರ ತನಕ ಜರಗಲಿದೆ.
ಜ. 20ರಂದು ಪೂರ್ವ ಸಂಪ್ರದಾಯದಂತೆ ಉಗ್ರಾಣ ಮುಹೂರ್ತ ಮತ್ತು ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು. ಜ. 25ರಂದು ಸಂಜೆ 5.00 ಗಂಟೆಗೆ ಬಾಳಿಲ ಕಾಂಚೋಡು ದೇವಳದ ಮಹಾದ್ವಾರದ ಬಳಿಯಿಂದ ಹಸಿರು ಕಾಣಿಕೆ ಮೆರವಣಿಗೆ ನಡೆಯಲಿದೆ. ಜ. 26ರಂದು ಬೆಳಿಗ್ಗೆ 9.30ರಿಂದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಿಶೇಷ ತಂಬಿಲ ಸೇವೆ, ನಾಗತಂಬಿಲ ನಡೆಯಲಿದೆ. ಮೂರುಕಲ್ಲಡ್ಕದಲ್ಲಿ ಪೂ. 11.00ರಿಂದ ನಾಗತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಜ. 27ರಂದು ಬೆಳಿಗ್ಗೆ 8.30ಕ್ಕೆ ಮಹಾಗಣಪತಿ ಹವನ ಸಹಿತ ಚಂಡಿಕಾ ಹವನ, ದುರ್ಗಾಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಜ. 28ರಂದು ಬೆಳಗಿನ ಜಾವ 5.00 ಗಂಟೆಗೆ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ತೋಟದಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಡಲಿದೆ. ಪ್ರಾತಃಕಾಲ 7.00ರಿಂದ ಕಲ್ಲಮಾಡದಲ್ಲಿ ಉಳ್ಳಾಕುಲು ಶ್ರೀ ಮುಡಿ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಜ. 29ರಂದು ಬೆಳಿಗ್ಗೆ 7.30ಕ್ಕೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ ಹೊರಡುವುದು ಬೆಳಿಗ್ಗೆ 8.00 ಗಂಟೆಗೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಬೆಳಿಗ್ಗೆ 10.00 ಗಂಟೆಯಿಂದ ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಮತ್ತು ಕೊಡಮಣಿತ್ತಾಯ ದೈವಗಳ ನೇಮೋತ್ಸವ ಜರಗಲಿದೆ. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಅಪರಾಹ್ನ 2.30 ಕ್ಕೆ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ಉತ್ಸವ ನಡೆದು ತಂಬಿನಮಕ್ಕಿಯವರೆಗೆ ಮಾರಿಹೋಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜ. 27ರಂದು ಮೂರುಕಲ್ಲಡ್ಕದಲ್ಲಿ ಸಂಜೆ 6.30ರಿಂದ ಕನ್ನಡ ಕೋಗಿಲೆ ಖ್ಯಾತಿಯ ಶ್ರೀಮತಿ ಕಲಾವತಿ ದಯಾನಂದರವರ ಕಲಾ ಸಿಂಧು ಸಂಗೀತ ಬಳಗ ಉಡುಪಿ ಇವರಿಂದ ಸುಗಮ ಸಂಗೀತ ನಡೆಯಲಿದೆ. ಜ. 28ರಂದು ಸಂಜೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮಂಗಳೂರು ವಿಭಾಗದ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳಂಜ ಶುಭಾಶಂಸನೆ ನೀಡಲಿದ್ದಾರೆ. ಅಭ್ಯಾಗತರಾಗಿ ಕೇಂದ್ರ ಅಪರಾಧ ವಿಭಾಗ ಬೆಂಗಳೂರು ಇದರ ಸಹಾಯಕ ಪೋಲೀಸ್ ಆಯುಕ್ತ ಜಗನ್ನಾಥ ರೈ ಬಿ ಮತ್ತು ಅತಿಥಿಯಾಗಿ ಬೆಳ್ಳಾರೆ ಪೊಲೀಸ್ ಠಾಣಾ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.