ರೋಟರಿ ಆಂಗ್ಲಮಾದ್ಯಮ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಒಂಭತ್ತನೇ ತರಗತಿಯ ಗೈಡ್ಸ್ ವಿದ್ಯಾರ್ಥಿನಿಯರಿಂದ ಗೈಡ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ದಿನದ ಮಹತ್ವವನ್ನು ವರ್ಣಿಸಿದರು. ವಿದ್ಯಾರ್ಥಿನಿ ಕು. ರಮ್ಯ ಪಾರ್ವತಿ ಹೆಣ್ಣುಮಗಳಾಗಿ ತಮ್ಮ ಕರ್ತವ್ಯದ ಕುರಿತು ಮಾತನಾಡಿದರು. ಏಳನೇ ತರಗತಿಯ ಗೈಡ್ ವಿದ್ಯಾ ರ್ಥಿನಿಯರು ಹೆಣ್ಣುಮಕ್ಕಳ ಕುರಿತು ಜಾಗೃತಿ ಗೀತೆಯನ್ನು ಹಾಡಿದರು.
ಶಿಕ್ಷಕಿಯರಾದ ಶ್ರೀಮತಿ ಚಂದ್ರಕಲಾ.ಡಿ,ಉಷಾ. ಪಿ.ಎಂ. , ಸಂಜೀವಿ.ಪಿ.ಆರ್, ರಮ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೈಡ್ ವಿದ್ಯಾರ್ಥಿನಿ ಕು. ಸನಿಹ ಶೆಟ್ಟಿ ಸ್ವಾಗತಿಸಿ, ಕು. ಪ್ರಣಮ್ಯ ವಂದಿಸಿದರು. ಧ್ವಜ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿ ಸಹಕರಿಸಿದರು.