ಸಪ್ತಪದಿ ತುಳಿಯುತ್ತಲೇ ನೇತ್ರದಾನದ ಸಂಕಲ್ಪ ಕೈಗೊಂಡು ಮಾದರಿಯಾದ ನವವಧು..!

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

*

*ಅಮೃತಗಂಗಾ ಸೇವಾ ಸಂಸ್ಥೆಯಿಂದ ಗಣರಾಜ್ಯೋತ್ಸವ ಪ್ರಯುಕ್ತ ನೇತ್ರದಾನ ಅಭಿಯಾನ*

ಸುಳ್ಯ: ಸಪ್ತಪದಿ ತುಳಿದು ಹಸೆಮಣೆಯೇರಿ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಲೇ ನೇತ್ರದಾನದ ವಿಶಿಷ್ಟ ಸಂಕಲ್ಪ ಕೈಗೊಂಡು ನವವಧು ಒಬ್ಬರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಪಾಡ್ಲ ಮೀನಾಕ್ಷಿ ಮತ್ತು ಧರ್ನಪ್ಪ ಇವರ ಪುತ್ರಿ ಚಿ.ಸೌ.ಸುಚಿತ್ರಾ ಅವರ ವಿವಾಹವು ಎಡಮಂಗಲ ಗ್ರಾಮದ ಬೋಳ್ಕಜೆ ಸೀತಾಲಕ್ಷ್ಮಿ ಮತ್ತು ಚಂದ್ರಶೇಖರ ಇವರ ಪುತ್ರ ಚಿ.ಮನೋಹರ ಇವರೊಂದಿಗೆ ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನೆರವೇರಿತು.

ದಾಂಪತ್ಯ ಜೀವನಕ್ಕೆ ಕಾಲಿರಿಸುವ ಸಂದರ್ಭದಲ್ಲಿ ಸಮಾಜಮುಖಿಯಾಗಿ ತಾನು ಮಾದರಿಯಾಗಬೇಕೆಂಬ ಆಶಯ ಹೊಂದಿದ್ದ ಸುಚಿತ್ರಾ ಅವರು ನೇತ್ರದಾನದ ಸಂಕಲ್ಪ ಕೈಗೊಳ್ಳಲು ಯೋಚಿಸಿದ್ದರು. ಹಾಗಾಗಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ವಿವಾಹ ಮಂಟಪಕ್ಕೆ ಬರುವಂತೆ ವಿನಂತಿಸಿಕೊಂಡಿದ್ದರು. ವಿವಾಹದ ಸಾಂಪ್ರದಾಯಿಕ ವಿಧಿವಿಧಾನ ಮುಗಿದ ಬಳಿಕ ಆರತಕ್ಷತೆಯ ಸಂದರ್ಭದಲ್ಲಿ ನೇತ್ರದಾನ ಸಂಕಲ್ಪ ಕೈಗೊಂಡು ಸಹಿ ಮಾಡಿದ ಒಪ್ಪಿಗೆ ಪತ್ರವನ್ನು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಕಾರ್ಯಕರ್ತರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಮೃತಗಂಗಾ ಸಂಸ್ಥೆಯ ಉದಯಭಾಸ್ಕರ್ ಸುಳ್ಯ, ದಯಾನಂದ ಅಡ್ಕಾರು ಹಾಗೂ ಯುವ ವಿವೇಕ್ ಫೋರ್ಸ್ ಸುಳ್ಯ ಇದರ ಕಾರ್ಯಕರ್ತರಾದ ವಿಜೇತ್ ಸುವರ್ಣ, ಹೇಮಂತ್ ದೊಡ್ಡೇರಿ ಉಪಸ್ಥಿತರಿದ್ದರು. ನವವಧುವಿನ ಸಂಕಲ್ಪಕ್ಕೆ ವಿಜೇತಾ ಮಂಜುನಾಥ್ ಮತ್ತು ವಧುವಿನ ಸೋದರ ಜಯಪ್ರಕಾಶ್ ಹಾಗೂ ಮನೆಯವರು ಪ್ರೋತ್ಸಾಹಿಸಿ ಸಹಕರಿಸಿದರು.

ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಅಮೃತದೃಷ್ಟಿ ನೇತ್ರದಾನ ಅಭಿಯಾನ ನಡೆಸಲಾಗಿದ್ದು ಬಾಳಿಲ, ಕನಕಮಜಲು, ಅಡ್ಕಾರು ಪರಿಸರದಲ್ಲಿ ಸ್ವ ಇಚ್ಛೆಯಿಂದ ನೇತ್ರದಾನ ಸಂಕಲ್ಪ ಕೈಗೊಂಡ ದಾನಿಗಳ ಮನೆಗಳಿಗೆ ತೆರಳಿ ಸಹಿ ಹಾಕಿದ ಒಪ್ಪಿಗೆ ಪತ್ರವನ್ನು ಪಡೆಯಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.