ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪವಾದ 2022 ಆಗಸ್ಟ್ 15 ರ ವರೆಗೂ ಭ್ರಷ್ಟಾಚಾರದ ವಿರುದ್ಧದ ಆಂದೋಲನ ಮುಂದುವರಿಯಬೇಕು : ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle


ಲಂಚ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಜನಜಾಗೃತಿ ಅಭಿಯಾನ 75 ನೇ ಸ್ವಾತಂತ್ರ್ಯ ವನ್ನು ಸಂಭ್ರಮಿಸುತ್ತಿರುವ ನಮ್ಮ ದೇಶಕ್ಕೆ ಅತ್ಯಂತ ಅವಶ್ಯಕವಾಗಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ನಮ್ಮ ದೇಶ ಲಂಚ ಮತ್ತು ಭ್ರಷ್ಟಾಚಾರದ ಕಪಿಮುಷ್ಠಿ ಯಲ್ಲಿ ಸಿಲುಕಿ ನಾವೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಈ ದೇಶದ ಜನ ವಿದ್ಯಾವಂತರೂ ಬುದ್ಧಿವಂತರೂ ಆದರೂ ಪ್ರಜ್ಞಾವಂತರಾಗದೆ ಇನ್ನೂ ಕೂಡಾ ಪ್ರಜಾಪ್ರಭುತ್ವ ಆಡಳಿತದ ನಿಜಾರ್ಥವನ್ನು ನಾವು ಅರಿತುಕೊಳ್ಳದಿರುವುದು ದುರದೃಷ್ಟಕರ. ಅಧಿಕಾರ, ಹಣ, ದರ್ಪಕ್ಕೆ ಬೆಲೆ ಸಿಕ್ಕಿ ಸತ್ಯ, ನಿಷ್ಠೆ, ನ್ಯಾಯ, ಧರ್ಮಗಳನ್ನೊಳಗೊಂಡ ಮಾನವೀಯ ಮೌಲ್ಯಗಳಿಗೆ ಸಂಚಕಾರ ಉಂಟಾಗಿದೆ.
ಇನ್ನಾದರೂ ನಾವು ಎಚೆತ್ತುಕೊಳ್ಳಬೇಕಾಗಿದೆ. ಪ್ರಜ್ಞಾವಂತ ಪ್ರಜೆಗಳಾಗಿ ಭಾರತ ದೇಶದ ಭವಿಷ್ಯ ರೂಪಿಸಬೇಕಾಗಿದೆ. ಲಂಚ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಸಂಪತ್ತು ಮತ್ತು ಸ್ಥಾನಮಾನ ಗಳಿಸಿದವರನ್ನು ಕಡೆಗಣಿಸಿ ನೋಡಬೇಕಾಗಿದೆ. ಅಂತಹ ಮಂದಿಯನ್ನು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅತಿಥಿಗಳಾಗಿ ವೇದಿಕೆಗೆ ಏರಿಸಬಾರದು. ಸನ್ನಡತೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರುಗಳನ್ನು ಆಯ್ಕೆ ಮಾಡಿ ಸಭೆಯ ವೇದಿಕೆಯನ್ನು ಶ್ರೀಮಂತಗೊಳಿಸಬೇಕು. ಇದರಿಂದ ಲಂಚ ಭ್ರಷ್ಟಾಚಾರದಲ್ಲಿ ತಲ್ಲೀನರಾದವರ ಮನ ಪರಿವರ್ತನೆಯಾಗಿ ಮಾನವೀಯತೆಗೆ ಮರಳಲು ಅವರ ಮನ ಹಾತೊರೆಯಬಹುದು. ಲಂಚ ಭ್ರಷ್ಟಾಚಾರದ ಬದುಕು ಹೇಸಿಗೆ ಅನಿಸಬಹುದು. ಉತ್ತಮ ಸೇವೆ ನೀಡುತ್ತಿರುವ ಆಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಹಳ್ಳಿ ಹಳ್ಳಿಗಳಲ್ಲಿ ಜನರೆಲ್ಲರೂ ಸೇರಿ ಅಭಿನಂದಿಸುವ ಕಾರ್ಯದಲ್ಲಿ ತೊಡಗಬೇಕು.
ಸುಳ್ಯದ ಗ್ರಾಮಗ್ರಾಮಗಳಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರಿ ಸಂಘಗಳು, ಗ್ರಾಮ ಪಂಚಾಯಿತಿಗಳು, ಅಂಚೆ ಕಚೇರಿ, ಶಾಲೆಗಳ ಬಹುತೇಕ ಸಿಬ್ಬಂದಿಗಳು ಲಂಚ ಭ್ರಷ್ಟಾಚಾರ ದಲ್ಲಿ ತೊಡಗಿಸಿಕೊಳ್ಳದೆ ಉತ್ತಮ ಸೇವೆಯಲ್ಲಿ ನಿರತರಾಗಿದ್ದಾರೆ. ಅವರನ್ನು ಗುರುತಿಸಿ ಅಭಿನಂದಿಸುವ ಕೆಲಸವಾಗಬೇಕು. ಅದೇ ರೀತಿ ಲಂಚ ಭ್ರಷ್ಟಾಚಾರ ಇಲ್ಲದೇ ಜನಸೇವೆ ಮಾಡುತ್ತಿರುವ ಅದೆಷ್ಟೋ ಜನಪ್ರತಿನಿಧಿಗಳು ಕೂಡಾ ಗ್ರಾಮಗಳಲ್ಲಿದ್ದಾರೆ. ಅಂತಹವರನ್ನು ಕೂಡಾ ಗುರುತಿಸಿ ಅಭಿನಂದಿಸುವ ಕೆಲಸವಾಗಬೇಕು.
ಇಷ್ಟು ಕೆಲಸ ಮಾಡಲು ಜನ ಮುಂದೆ ಬಂದರೆ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಕಷ್ಟ ಸಾಧ್ಯವೇನಲ್ಲ. ನಾವೆಲ್ಲರೂ ಗುಲಾಮಗಿರಿಯಿಂದ ಹೊರಬಂದು ನಿಜಾರ್ಥದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಸವಿಯನ್ನು ಅನುಭವಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ನಮ್ಮ ಜವಾಬ್ದಾರಿ ನಿರ್ವಹಿಸಿದರೆ ಭವ್ಯ ಭಾರತದ ಕನಸು ನನಸಾಗುವುದರಲ್ಲಿ ಎರಡು ಮಾತಿಲ್ಲ.
ಮುಂದಿನ ಆಗಸ್ಟ್ 2022 ರ ತನಕ ಅಮೃತ ಮಹೋತ್ಸವದ ಸ್ವಾತಂತ್ರ್ಯವಾಗಿದ್ದು ಆ ತನಕ ನಾವೆಲ್ಲರೂ “ಲಂಚ ಭ್ರಷ್ಟಾಚಾರ ಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ” ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ನಡೆಸಿಕೊಂಡು ಬಂದಲ್ಲಿ ಜನಜಾಗೃತಿ ಉಂಟಾಗಿ ಯಶಸ್ಸು ಖಂಡಿತ ಸಾಧ್ಯ.
ಛಲ ಬಿಡದ ತ್ರಿವಿಕ್ರಮ ನಂತೆ ಕಳೆದ ನಾಲ್ಕು ದಶಕಗಳಿಂದ ಈ ವಿಚಾರಗಳನ್ನು ಪ್ರತಿಪಾದಿಸಿಕೊಂಡು ಹೋರಾಟವನ್ನು ಮಾಡಿಕೊಂಡು ಬರುತ್ತಿರುವ ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ|ಯು.ಪಿ.ಶಿವಾನಂದರ ಆಶಯ ಮತ್ತು ಪ್ರಯತ್ನಕ್ಕೆ ಈ ಒಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಲ್ಲಿ ಯಶಸ್ಸು ಸಿಗಲಿ ಮತ್ತು ಆ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂಬ ಆಶಯದೊಂದಿಗೆ,

ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.