ಇಂದು ಬೆಳ್ಳಾರೆ ಠಾಣೆಯಲ್ಲಿ ಬೀಳ್ಕೊಡುಗೆ
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆಸಲ್ಲಿಸುತ್ತಿದ್ದ ವಸಂತ ಗೌಡ ಎನ್.ರವರು ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಇವರು 2016 ರಿಂದ ಬೆಳ್ಳಾರೆ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಇವರು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಮನೆಯವರು.
ಬೀಳ್ಕೊಡುಗೆ
ವರ್ಗಾವಣೆಗೊಂಡಿರುವ ವಸಂತ ಗೌಡರನ್ನು ಠಾಣೆಯ ವತಿಯಿಂದ ಬೀಳ್ಕೊಡಲಾಯಿತು.
ಠಾಣಾಧಿಕಾರಿ ಆಂಜನೇಯ ರೆಡ್ಡಿಯವರು ವಸಂತ ಗೌಡರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿ ಮಾತನಾಡಿದರು.
ಠಾಣಾ ಸಿಬ್ಬಂದಿ ಚಂದ್ರಶೇಖರ ಗೌಡ ಹಾಗೂ ಚೇತನ್ ಕುಮಾರ್ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಐ ಗಳಾದ ಭಾಸ್ಕರ ಅಡ್ಕಾರು,ಸುಧಾಕರ,ನಾರಾಯಣ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.