ಇತ್ತೀಚೆಗೆ ನಿಧನರಾದ ಹರಿಹರ ಪಲ್ಲತಡ್ಕ ಗ್ರಾಮದ ಬೆಂಡೋಡಿ ಎಂಬಲ್ಲಿಯ ದಿ. ದೋಳ ವಾಚಣ್ಣ ಗೌಡರ ಪತ್ನಿ ಕುಸುಮಾವತಿ ಅವರ ಉತ್ತರ ಕ್ರಿಯಾದಿ ಸದ್ಗತಿ ಹಾಗೂ ಶ್ರದ್ಧಾಂಜಲಿ ಸಭೆ ಜ. 28 ರಂದು ಬೆಂಡೋಡಿ ದೋಳ ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ನುಡಿ ನಮನವನ್ನು ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಯ ಮಾಜಿ ಸದಸ್ಯ ದಿನೇಶ್ ಹಾಲೆಮಜಲು ರವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರ ಮಗ ಜಯರಾಮ ಮಕ್ಕಳಾದ ವೇದಾವತಿ, ಲೀಲಾವತಿ, ವನಿತಾ ಸೇರಿದಂತೆ ಅವರ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.