ಜ. 28ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ವಿಭಾಗದ ವತಿಯಿಂದ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಚಿದಾನಂದ ಕೆ. ವಿ.ಯವರು ವಹಿಸಿ, ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕುರಿತಾಗಿ ಶಿಕ್ಷಣ ಇಲ್ಲದೆ ಇದ್ದರೆ ಯಾರು ಮುಂದೆ ಬರಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ ಅವರ ಅಭಿವೃದ್ಧಿ ಅವರಿಂದ ಸಾಧ್ಯ. ಹೆಣ್ಣು ಮಕ್ಕಳ ಶಿಕ್ಷಣ, ಸವಲತ್ತು, ಅವರ ಮಹತ್ತರ ಸಾಧನೆ ಬಗ್ಗೆ ಪ್ರಶಂಸಿಸಿ ಹೆಣ್ಣು ಮಕ್ಕಳನ್ನು ಯಾವುದೇ ಕಿಳುಭಾವನೆಯಿಂದ ನೋಡದೆ ಅವರ ರಕ್ಷಣೆಯ ಕುರಿತಾಗಿ ಹೆಣ್ಣು ಮಕ್ಕಳ ಸಾಧನೆಯ ಬಗ್ಗೆ , ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಕುರಿತು ಸ್ವಾಗತ ಪರಿಚಯವನ್ನು ಡಾ. ಶ್ಯಾಮ್ ಸುಂದರ್, ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ವಿಶೇಷತೆ ಬಗ್ಗೆ ಡಾ. ಉಜ್ವಲ್ , ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ಪರಿಚಯ ಮತ್ತು ಮಾಹಿತಿಯನ್ನು ಡಾ. ಗೀತಾ ದೊಪ್ಪರವರು ನೀಡಿದರು. ಡಾ. ಅಮೃತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಹಿಳೆಯರ ಸಾಧನೆ ಕುರಿತಾದ ಕಿರುಚಿತ್ರ ಪ್ರದರ್ಶನ ಹಮ್ಮಿಕೊಳ್ಳಾಲಾಯಿತು. ವೇದಿಕೆಯಲ್ಲಿ ಡಾ. ಶೀಲಾ ಜಿ. ನಾಯಕ್, ಡಾ ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಾ. ಸ್ನೇಹಾ ಧನ್ಯವಾದಗೆದು., ಡಾ. ರಾಶೀಕಾ ಕಾರ್ಯಕ್ರಮ ನಿರೂಪಿಸಿದರು.