ಜಾಲ್ಸೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಡಿಜಿಟಲ್ ಸಾಮಾನ್ಯ ಸೇವಾ ಕೇಂದ್ರವು ಜ.28ರಂದು ಉದ್ಘಾಟನೆಗೊಂಡಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜಾಲ್ಸೂರಿನ ಶ್ರೀ ಗುರು ರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಜಾಲ್ಸೂರು ವಲಯದ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಉದ್ಘಾಟಿಸಿ, ಶುಭಹಾರೈಸಿದರು. ಯೋಜನಾಧಿಕಾರಿಗಳಾದ ಚೆನ್ನಕೇಶವ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಭಜನಾಮಂದಿರದ ಕಾರ್ಯದರ್ಶಿ ಮೋಹನ, ಒಕ್ಕೂಟದ ಅಧ್ಯಕ್ಷ ಸುಚಿತ್ರ ಬಿ.ಎನ್., ಕೃಷ್ಣಪ್ಪ ನಾಯ್ಕ ಮಹಾಬಲಡ್ಕ, ಜೌರಾಬಿ, ರೇಖಾ, ಹಣಕಾಸು ಪ್ರಬಂಧಕರಾದ ಆತೀಸ್, ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಶ್ರೀಮತಿ ಸುಜಾತ, ಸೇವಾ ಪ್ರತಿನಿಧಿ ಶ್ರೀಮತಿ ವೀಣಾ ಸುನಿಲ್ ಅಡ್ಕಾರು, ಶೃತಿಕ, ಲೋಲಾಕ್ಷಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.