ಕಾರು ಜಖಂ
ಬಳ್ಪದ ಬಳಿ ಕಾರು ಬಸ್ ಢಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಇಂದು ನಡೆದಿದೆ. ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುವ ಕೆ.ಎಸ್. ಆರ್. ಟಿ..ಸಿ ಬಸ್ಸೊಂದನ್ನು ಬಳ್ಪದ ಕೋಡಂಗೋಳಿಯ ರಾಜೇಶ್ ಎಂಬವರು ಕಾರಿನಲ್ಲಿ ಓವರ್ ಟೇಕ್ ಮಾಡಿ, ಎದುರಿನಿಂದ ಬಂದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ತಮ್ಮ ಕಾರನ್ನು ಎಡಬದಿಗೆ ತಿರುಗಿಸಿದಾಗ, ಹಿಂಬದಿಯಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಕಾರು ಅಲ್ಪ ಸ್ವಲ್ಪ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.