ಸುಳ್ಯದಲ್ಲಿ ” ಸೀತಾಭಿಮಾನ : ಒಂದು ಒಳ ನೋಟ” ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸವಣೂರು ಸೀತಾರಾಮ ರೈಯವರಿಗೆ ಸುಳ್ಯದ ಸಂಘ ಸಂಸ್ಥೆಗಳ ಸನ್ಮಾನ

 

ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು , ಯುವಜನ ಸೇವಾ ಸಂಸ್ಥೆ ಸುಳ್ಯ , ರೋಟರಿ ಕ್ಲಬ್ ಸುಳ್ಯ ಮತ್ತು ಲಯನ್ಸ್ ಕ್ಲಬ್ ಸುಳ್ಯ ಸಹಯೋಗದಲ್ಲಿ ಸವಣೂರಿನ ಶಿಲ್ಪಿ, ಸಂಘ ಸಂಸ್ಥೆಗಳ ಪ್ರೋತ್ಸಾಹಕ ಕೆ.ಸೀತಾರಾಮ ರೈಯವರ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸೀತಾಭಿಮಾನ – ಒಂದು ಒಳನೋಟ ಕಾರ್ಯಕ್ರಮವು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ಇಂದು ನಡೆಯಿತು.

ಭಾರತ್ ಆಗ್ರೋ ಮತ್ತು ಸಪ್ಲೈಸರ್ಸ್ ಸಂಸ್ಥೆಯ ಮಾಲಕ ರಾಮಚಂದ್ರ ಪಿ. ಕಾರ್ಯಕ್ರಮ ಉದ್ಘಾಟಿಸಿ ಸೀತಾರಾಮ ರೈಗಳೊಂದಿಗಿನ ಆತ್ಮೀಯ ಮತ್ತು ಭಾವನಾತ್ಮಕ ಒಡನಾಟವನ್ನು ನೆನಪಿಸಿಕೊಂಡರು.

ಯುವಜನ ಸಂಯುಕ್ತ ಮಂಡಳಿ ಸ್ಥಾಪಕ ಗೌರವ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಎಂ.ಗೌಡ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಅಧ್ಯಕ್ಷ ಚಂದ್ರಶೇಖರ ಪೇರಾಲು ಸೀತಾರಾಮ ರೈಯವರ ಸುಳ್ಯದ ಒಡನಾಟದ ಕುರಿತು . ” ಸೀತಾರಾಮ ರೈಯವರು ಸುಳ್ಯದ ಶಕ್ತಿಯಾಗಿರುವವರು. ಕುರುಂಜಿಯವರ ಬಳಿಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸುಳ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಅವರು. ಬೇರೆ ಸ್ತರಗಳಲ್ಲಿ ಸುಳ್ಯದೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡು ಆತ್ಮೀಯತೆ, ಬಾಂಧವ್ಯ, ಸಹಕಾರ, ಸಂಘಟನೆ, ಕೊಡುಗೆಗಳ ಮೂಲಕ ಅವರು ಸಂಪಾದಿಸಿದ್ದಾರೆ ಎಂದರು. ಸಾಧನೆಯ ಮೂಲಕ ಜನರಿಗೆ ಹತ್ತಿರವಾದ ರೈಗಳಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕು. ಅದಕ್ಕೆ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದವರು ಹೇಳಿದರು.

ಸಮಾರಂಭದಲ್ಲಿ ಸೀತಾರಾಮ ರೈಯವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ವಿಲಿಯಂ ಲಸ್ರಾದೋ ಸನ್ಮಾನ ನೆರವೇರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೀತಾರಾಮ ರೈಯವರು ನನ್ನ ಸಮಾಜ ಸೇವೆಗೆ ತಂದೆಯೇ ಪ್ರೇರಣೆ. ಕಷ್ಟದಲ್ಲಿ ಜೀವನ ನಡೆಸಿದ ಅನುಭವ ನನಗಿದೆ. ಹಾಗಾಗಿಯೇ ಗಳಿಕೆಯಲ್ಲಿ ಶೇ.25ನ್ನು ಸಮಾಜ ಸೇವೆಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಎ.ಪಿ.ಎಂ.ಸಿ.ನಿರ್ದೇಶಕ ಹಾಜಿ ಆದಂ ಕಮ್ಮಾಡಿ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್, ರಾಜ್ಯ ಲಗೋರಿ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು , ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ, ಸುಳ್ಯ ಲಯನ್ಸ್ ಕ್ಲಬ್ ಉಪಾಧ್ಯಕ್ಷೆ ಶ್ರೀಮತಿ ರೂಪಾ ಜೆ. ರೈ ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರ್ದೇಶಕರಾದ ಯುವ ಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿ ಪ್ರಸ್ತಾವನೆಗೈದರು . ಕಾರ್ಯಕ್ರಮ ನಿರ್ದೇಶಕರಾದ ಯುವಜನ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ವಂದಿಸಿದರು.

 

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.