ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ 26 ವಿದ್ಯಾರ್ಥಿನಿಯರು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದು, 25 ಮಂದಿ ತೇರ್ಗಡೆ ಹೊಂದಿ ಶೇ.96.15 ಫಲಿತಾಂಶ ಪಡೆದುಕೊಂಡಿದೆ.
7 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದರೆ, 15 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಮತ್ತು 3 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಬೊಳುಬೈಲು ಮೊಯಿದು ಕುಟ್ಟಿ ಬಿ. ಮತ್ತು ಆಯಿಷ ದಂಪತಿಯ ಪುತ್ರಿ ಫಾತಿಮತ್ ಅಝ್ಮೀಯ ಬಿ 587 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಬೊಳುಬೈಲು ಲತೀಫ್ ಬಿ ಮತ್ತು ಜುಲೈಕ ದಂಪತಿಯ ಪುತ್ರಿ ಸಮ್ನಾ.ಬಿ 570 ಅಂಕ, ಎಡಮಂಗಲ ಗ್ರಾಮದ ಪಟ್ಟದಮೂಲೆ ತಿಮ್ಮಪ್ಪ ಗೌಡ ಮತ್ತು ಸಾವಿತ್ರಿ ದಂಪತಿಯ ಪುತ್ರಿ ಮೌಲ್ಯಶ್ರೀ ಪಿ. 563 ಅಂಕ, ಅಮರಮುಡ್ನೂರು ಗ್ರಾಮದ ದೊಡ್ಡತೋಟ ಮೈರ್ಪಳ್ಳ ರಾಮಕೃಷ್ಣ ಮತ್ತು ತಾರಾ ದಂಪತಿಯ ಪುತ್ರಿ ವರ್ಷಾ ಎಂ. 555 ಅಂಕ, ಕೋಲ್ಚಾರು ಮನೆ ಮನಮೋಹನ ಕೆ.ಆರ್. ಮತ್ತು ಲೋಲಾಕ್ಷಿ ದಂಪತಿಯ ಪುತ್ರಿ ಧನ್ಯಶ್ರೀ ಕೆ.ಎಂ 553 ಅಂಕ, ಕುರುಂಜಿಭಾಗ್ ಗಣರಾಜ ಭಟ್ ಮತ್ತು ಕೃಷ್ಣವೇಣಿ ಕೆ. ದಂಪತಿಯ ಪುತ್ರಿ ಅಪರ್ಣಭಟ್ ಕೆ. 540 ಅಂಕ, ಪೈಚಾರಿನ ಕೆ.ಎಂ.ಆಬಿದ್ ಮತ್ತು ಜಿ.ಶಾದಿರಾ ದಂಪತಿಯ ಪುತ್ರಿ ಅಪ್ನಾಮರಿಯಂ 534 ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ.