ತಾಲೂಕಿನಲ್ಲಿ ರೈತ ಶಕ್ತಿ ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಉತ್ಪಾದನೆ ಹೆಚ್ಚಿಸಿ ಇಂಧನ ವೆಚ್ಚ ಕಡಿಮೆ ಮಾಡಲು ಪ್ರತಿ ಎಕ್ರೆಗೆ ೨೫೦ ರೂ. ಹಾಗೂ ೫ ಎಕ್ರೆಗೆ ೧೨೫೦ ರೂ.ಗಳಂತೆ ನೇರ ನಗದು ಮೂಲಕ ಡೀಸೆಲ್ ಸಹಾಯಧನ ಪಡೆಯಲು ಫಲಾನುಭವಿ ರೈತರು ಸೂಕ್ತ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳು ರೇಷ್ಮೆ ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಗಳನ್ನು ಸಂಪರ್ಕಿಸಬಹುದೆಂದು ಸುಳ್ಯ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.