ಜೆಸಿಐ ಬೆಳ್ಳಾರೆ ವತಿಯಿಂದ ಕೊರೋನಾ ಹಾಗೂ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಇರುವ ಭಿತ್ತಿಚಿತ್ರ ಬಿಡುಗಡೆ ಮಾಡಲಾಯಿತು. ಜೆಸಿಐ ವಲಯ Zone director ಜೇಸಿ ಪುರುಷೋತ್ತಮ್ ಶೆಟ್ಟಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ Z V P ಸ್ವಾತಿ ರೈ, ಜೇಸಿ ಮಡಂತ್ಯಾರಿನ ಅಧ್ಯಕ್ಷ ಭರತ್ ಶೆಟ್ಟಿ, ಬೆಳ್ಳಾರೆ ಜೇಸಿಐ ಅಧ್ಯಕ್ಷೆ ನಿರ್ಮಲಾ ಜಯರಾಮ್ ಪೂರ್ವಾಧ್ಯಕ್ಷರಾದ ಜೆ ಸಿ ಪ್ರಸಾದ್ ಸೇವಿತ, ಜೆಸಿ ವೀರನಾಥ, ಜೆ ಸಿ ಸದಸ್ಯರಾದ ಪ್ರದೀಪ್ ಮತ್ತು ಲೋಕೇಶ್ ತಡಗಜೆ ಉಪಸ್ಥಿತರಿದ್ದರು. ನಂತರ ಶಾಲಾ ಕಾಲೇಜು ಮತ್ತು ಬಸ್ ನಿಲ್ದಾಣಗಳಲ್ಲಿ ಭಿತ್ತಿಚಿತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.