ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾದ ಸಾತ್ವಿಕ್ ಹೆಚ್.ಎಸ್., ದ್ವಿತೀಯ ಸ್ಥಾನಿಗಳಾದ ಪ್ರಿಮಲ್ ವೆನಿಷಾ ಡಿಸೋಜಾ ಮತ್ತು ಪ್ರದೀಪ್ ಟಿ., ತೃತೀಯ ಸ್ಥಾನಿಯಾದ ಭವಿತ್ ಬಾಳುಗೋಡು ಅವರನ್ನು ಗೂನಡ್ಕ ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನ ಮತ್ತು ಸುದ್ದಿ ಸಮೂಹ ಸಂಸ್ಥೆ ವತಿಯಿಂದ ಸುದ್ದಿ ಚಾನೆಲ್ ಸ್ಟುಡಿಯೋದಲ್ಲಿ ಅಭಿನಂದಿಸಲಾಯಿತು.
ಸಜ್ಜನ ಪ್ರತಿಷ್ಠಾನದ ನಿರ್ದೇಶಕ, ಸುದ್ದಿ ವರದಿಗಾರ ಶರೀಫ್ ಜಟ್ಟಿಪ್ಪಳ್ಳ, ಸುದ್ದಿ ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ, ಜಾಹೀರಾತು ವಿಭಾಗ ಮುಖ್ಯಸ್ಥ ರಮೇಶ್ ನೀರಬಿದಿರೆ, ಕಂಪ್ಯೂಟರ್ ವಿಭಾಗ ಮುಖ್ಯಸ್ಥ ಶ್ರೀಧರ ಕಜೆಗದ್ದೆ, ವರದಿಗಾರರಾದ ಶಿವಪ್ರಸಾದ್ ಕೇರ್ಪಳ, ಈಶ್ವರ ವಾರಣಾಶಿ, ದಯಾನಂದ ಕೊರತ್ತೋಡಿ, ಶಿವರಾಮ ಕಜೆಮೂಲೆ, ಸುದ್ದಿ ಬಳಗದ ಅನಿಲ್ ಕಳಂಜ, ಮಂಜುನಾಥ ಪೈ, ಶ್ರೀಧಾಮ ಅಡ್ಕಾರ್, ಕಾರ್ತಿಕ್ ಹುದೇರಿ, ರಕ್ಷಿತ್ ಕುಕ್ಕುಜಡ್ಕ ಮೊದಲಾದವರು ಉಪಸ್ಥಿತರಿದ್ದರು. ಪೋಷಕರಾದ ಗದಾಧರ ಬಾಳುಗೋಡು, ಸದಾನಂದ ತೋಟ, ವೀಣಾ ಮೊಂತೇರೋ ಉಪಸ್ಥಿತರಿದ್ದರು.