ಆರೋಪಿ ಪೊಲೀಸ್ ವಶ
ಕೊಲ್ಲಮೊಗ್ರದ ಹೊಟೇಲೊಂದರ ಮಾಲಕಿಯ ಮೇಲೆ ಕಟ್ಟಡ ಮಾಲೀಕ ಮಾನಭಂಗ ಯತ್ನ ಮತ್ತು ಜೀವ ಬೆದರಿಕೆ ಒಡ್ಡಿದ ದೂರು ದಾಖಲಾದ ಘಟನೆ ವರದಿಯಾಗಿದೆ.
ಕೊಲ್ಲಮೊಗ್ರದ ಟಿ. ಎಂ ಮೊಹಮ್ಮದ್ ಎಂಬವರ ಕಟ್ಟಡದಲ್ಲಿ ಮಹಿಳೆಯೊಬ್ಬರು ಹೊಟೇಲ್ ನಡೆಸುತಿದ್ದು ಮೇ.24 ರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೊಹಮ್ಮದ್ ಬಂದು ಚಹಾ ಕೇಳಿದ್ದು, ಚಹಾ ಕೊಡುವಾಗ ಕೈ ಹಿಡಿದೆಳೆದಿದ್ದು ಮಾನ ಭಂಗಕ್ಕೆ ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿರುವುದಾಗಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಮೊಹಮ್ಮದ್ ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.