ಕಳಂಜದ ವೃದ್ಧರೊಬ್ಬರು ಬೇಂಗಮಲೆ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೃತರನ್ನು ಕಳಂಜ ಗ್ರಾಮದ ನಾಗಪ್ಪ ಎಂದು ಗುರುತಿಸಲಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಬೇಂಗಮಲೆ ರಸ್ತೆ ಬದಿಯ ರಕ್ಷಿತಾರಣ್ಯದ ಒಳಗೆ ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದರು. ವಿಷಯ ತಿಳಿದು ಜನ ಜಮಾಯಿಸಿದರು. ಪೊಲೀಸರು ಸ್ಥಳಕ್ಕೆ ಬಂದರು.
ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿತ್ತು. ಸ್ಥಳದಲ್ಲಿ ಚಪ್ಪಲಿಗಳು, ತಾಂಬೂಲ ಕಂಡುಬಂದಿದೆ. ವಿಚಾರಣೆ ವೇಳೆ ಈ ವ್ಯಕ್ತಿ ಕಳಂಜ ಗ್ರಾಮದ ನಾಗಪ್ಪ ಎಂದು ಗೊತ್ತಾಯಿತು.
ಅಸೌಖ್ಯದಿಂದ ಬಳಲುತ್ತಿದ್ದ ಇವರು ಕೆಲವು ದಿನಗಳ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರೆನ್ನಲಾಗಿದೆ. ಇಂದು ಸುಳ್ಯಕ್ಕೆ ಬಂದವರು ಸುಳ್ಯದಿಂದ ಹಗ್ಗ ಖರೀದಿಸಿ ನಡೆದುಕೊಂಡೆ ಬೆಂಗಮಲೆಯತ್ತ ಹೋಗಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸಾರಣೆ ಕೆಲಸ ಮಾಡುತ್ತಿದ್ದ ನಾಗಪ್ಪ ರವರು ಪತ್ನಿ ಸುಂದರಿ, ಮಕ್ಕಳಾದ ಪ್ರಶಾಂತ್, ಪ್ರವಿಣ, ಅಕ್ಷತಾ, ಅನಿತಾ ಅವರನ್ನು ಅಗಲಿದ್ದಾರೆ.