ಬೈಕ್ ಸವಾರನ ಕಾಲು ಜಖಂ
ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರೀ ಅನಾಹುತ
ಕೆ.ಎಸ್.ಆರ್.ಟಿ.ಸಿ. ಗೂಡ್ಸ್ ಬಸ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಜಖಂಗೊಂಡ ಘಟನೆ ಮೇ.26ರಂದು ಮಧ್ಯಾಹ್ನ ಕನಕಮಜಲಿನ ಆನೆಗುಂಡಿ ಎಂಬಲ್ಲಿ ಸಂಭವಿಸಿದೆ.
ಮಡಿಕೇರಿ ಡಿಪೋಗೆ ಸೇರಿದ ಕೆ.ಎಸ್
ಆರ್.ಟಿ.ಸಿ. ಗೂಡ್ಸ್ ಬಸ್ ಪುತ್ತೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಂಜದ ಯುವನೋರ್ವ ಚಲಾಯಿಸುತ್ತಿದ್ದ ಬೈಕ್ ಆನೆಗುಂಡಿ ತಿರುವಿನಲ್ಲಿ ಬಸ್ ನ ಮುಂಭಾಗಕ್ಕೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ವೇಳೆ ಬಸ್ ಚಾಲಕ ಬಸ್ಸನ್ನು ಸಂಪೂರ್ಣ ಎಡಭಾಗಕ್ಕೆ ಎಳೆದುಕೊಂಡದ್ದರಿಂದ ಬೈಕ್ ಸವಾರ ಬಲಬದಿಗೆ ಬಿದ್ದು, ಕೈ, ಹಾಗೂ ಎಡ ಕಾಲಿಗೆ ಗಂಭೀರವಾಗಿ ಗಾಯಗೊಂಡರು. ಬೈಕ್ ಸವಾರ ಪಂಜ ಲೋಕನಾಥ ಎಂಬವರ ಪುತ್ರ ಯೋಗಿತ್ ,ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿ.
ಈ ವೇಳೆ ಪುತ್ತೂರಿನಿಂದ ಕನಕಮಜಲು ಕಡೆಗೆ ಬರುತ್ತಿದ್ದ ಕಾರಿಂಜದ ದಿನೇಶ್ ಅವರ ಅಟೋರಿಕ್ಷಾದಲ್ಲಿ ಗಾಯಾಳು ಯುವಕನನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಬಸ್ ಚಾಲಕ ನಿಧಾನವಾಗಿ ಬಸ್ ಚಲಾಯಿಸುತ್ತಿದ್ದು, ಅಪಘಾತ ನಡೆದ ವೇಳೆ ಬಸ್ಸನ್ನು ಸಂಪೂರ್ಣ ಎಡಬದಿಗೆ ಎಳೆದುಕೊಂಡು ಕಾರಣದಿಂದ ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದಂತಾಗಿದೆ.