ಬೆಳ್ಳಾರೆ ಗೌರಿಹೊಳೆಯ ಪಕ್ಕದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ಚಿತ್ರಕೂಟ ಸಹಿತ ನಾಗಬಿಂಬ ಪ್ರತಿಷ್ಠೆ ಇಂದು ಬೆಳಿಗ್ಗೆಯಿಂದ ನಡೆಯಲಿದೆ.
ಬೆಳಗ್ಗೆ ಗಂಟೆ 6.00ರಿಂದ ಮಹಾ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪಂಚಗವ್ಯ ಪೂಜೆ, ಬಳಿಕ ಪರಮಪೂಜ್ಯ ಯೋಗಿ ಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮಿ ಕ್ಷೇತ್ರ, ಶ್ರೀಧಾಮ ಮಾಣಿಲ ಇವರ ದಿವ್ಯ ಉಪಸ್ಥಿತಿಯಲ್ಲಿ ಬೆಳಗ್ಗೆ ಗಂಟೆ 09.30ರ ನಂತರದ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ತಂತ್ರಿ ಬ್ರಹ್ಮಶ್ರೀ ಮುರಳಿಕೃಷ್ಣ ನಂಬೂದರಿ ಕುನ್ನತ್ತಿಲ್ಲ್ ಇವರ ನೇತ್ರತ್ವದಲ್ಲಿ ಚಿತ್ರಕೂಟ ಪ್ರತಿಷ್ಠೆ ಅಷ್ಠಕುಲ ಶ್ರೀ ನಾಗಬ್ರಹ್ಮ, ನಾಗರಾಜ, ವೀಣಾಪಾಣಿ ನಾಗಕನ್ನಿಕೆಯರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬಳಿಕ ಧಾರ್ಮಿಕ ಚಿಂತಕರಾದ ಗೋಪಾಲಕೃಷ್ಣ ವಾಂತಿಜಾಲುರವರಿಂದ ಶ್ರೀ ಕ್ಷೇತ್ರ ಗೌರಿಪುರಂ ಬಗ್ಗೆ ದಿಕ್ಸೂಚಿ ಭಾಷಣ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಇಂದು ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ನಡೆಯಲಿರುವ ಎಲ್ಲಾ ವೈದಿಕ, ಧಾರ್ಮಿಕ ಸಭಾಕಾರ್ಯಕ್ರಮಗಳು ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾರಗೊಳ್ಳಲಿದೆ.