ಜೇಸಿಐ ಪಂಜ ಪಂಚಶ್ರೀ, ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ, ಗ್ರಾಮ ಪಂಚಾಯತ್ ಪಂಜ ಇದರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೇ.25 ರಂದು ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಉದ್ಘಾಟಿಸಿ ಶುಭಹಾರೈಸಿದರು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಂಗಳೂರು ಹೆಚ್ ಎಲ್ ಎಲ್ ಲಿ. ಜಿಲ್ಲಾ ಸಂಯೋಜಕ ಪಿ ವಿ ಸುಬ್ರಮಣಿ , ಕಟ್ಟಡ ಕಾರ್ಮಿಕರ ಸಂಘಟನೆ ಪಂಜ ವಲಯ ಅಧ್ಯಕ್ಷ ಸತ್ಯನಾರಾಯಣ ಅಡ್ಡತೋಡು ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ,ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್,ಜೇಸಿಐ ಪಂಜ ಪಂಚಶ್ರೀ ಜೊತೆ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ
ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ತೀರ್ಥಾನಂದ ಕೊಡೆಂಕಿರಿ ವೇದಿಕೆಗೆ ಆಹ್ವಾನಿಸಿದರು. ಶಿವಪ್ರಸಾದ್ ಹಾಲೆಮಜಲು ಸ್ವಾಗತಿಸಿದರು. ವಿಜೇಶ್ ಹಿರಿಯಡ್ಕ ವಂದಿಸಿದರು.225 ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಘಟಕದ ಪೂರ್ವಾಧ್ಯಕ್ಷ ನಾಗಮಣಿ ಕೆದಿಲ, ಘಟಕದ ಉಪಾಧ್ಯಕ್ಷ ಜೀವನ ಮಲ್ಕಜೆ, ಪ್ರವೀಣ್ ಕಾಯರ, ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಗೋಪಾಲ್ ಎಣ್ಣೆಮಜಲು ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ ಪದ್ಮಯ್ಯ ,ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.