ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಎಲಿಮಲೆ ಇದರ ವತಿಯಿಂದ ನುಸ್ರತ್ ಇದರ 40 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ 40 ಕಾರ್ಯಕ್ರಮಗಳ ಪೈಕಿ ಮೂರನೇ ಕಾರ್ಯಕ್ರಮ ಎಲಿಮಲೆ ರಿಯಾಜ್ ಜುಮ್ಮಾ ಮಸೀದಿಗೆ ರೊಸ್ಟ್ರಮ್ (ಭಾಷಣ ಪೀಠ)ಕೊಡುಗೆ ಇದರ ಹಸ್ತಾಂತರ ಕಾರ್ಯಕ್ರಮ ಎಲಿಮಲೆ ಮದರಸ ಸಭಾಂಗಣದಲ್ಲಿ ಮೆ.26 ರಂದು ನಡೆಯಿತು.
ಎಲಿಮಲೆ ಜುಮ್ಮಾ ಮಸೀದಿ ಮದರಿಸ್ ಜೌಹರ್ ಅಹ್ಸನಿ ದುವಾಶಿರ್ವಚನ ಮೂಲಕ ಉದ್ಘಾಟಿಸಿ ರೊಸ್ಟ್ರಮ್ ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ಎಲಿಮಲೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆ ಯವರ ಮೂಲಕ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ನುಸ್ರತ್ ಇಸ್ಲಾಂ ಅಸೋಸಿಯೇಷನ್ ಹಾಗೂ ಎಲಿಮಲೆ ಬದ್ರಿಯಾ ಜಮಾಯತ್ ಕಮಿಟಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ನುಸ್ರತ್ ಕಾರ್ಯದರ್ಶಿ ಸೂಪಿ ಎಲಿಮಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.