ತನ್ನ ಜನ್ಮದಿನದಂದು ಕಲಾವಿದೆ ನಿಶಾ ಪ್ರಸಾದ್ ಅವರು ಕ್ಯಾನ್ಸರ್ ರೋಗಿಗಳಿಗಾಗಿ ತಲೆ ಕೂದಲು ದಾನ ಮಾಡಿದ್ದಾರೆ.
” ನನ್ನ ನಾಲ್ಕು ವರ್ಷದ ಮಗಳು ನಿಯತಿ , ಕೂದಲು ಕಟ್ ಮಾಡಿದ್ರೆ ಪುನಃ ಉದ್ದ ಬರ್ತದ ಅಂತ ಪದೇ ಪದೇ ಕೇಳ್ತಾ ಇದ್ಲು. ಅಮ್ಮ, ನಿನ್ನ ಉದ್ದ ಕೂದಲು ನಂಗೆ ಇಷ್ಟ . ಅದನ್ನು ನಾವು ಕಟ್ ಮಾಡಿ ತಲೆಯಲ್ಲಿ ಒಂದೂ ಕೂದಲು ಇಲ್ಲದವರಿಗೆ ಕೊಟ್ರೆ ಅವ್ರು ಕೂಡ ಚಂದ ಕಾಣುತ್ತಾರೆ ಅಲ್ವಾ ಅಂತ ಹೇಳಿದ್ಲು.
ಇದನ್ನು ಮನೆಯವರಲ್ಲಿ ಹೇಳಿದಾಗ ಫಸ್ಟ್ ಒಪ್ಲಿಲ್ಲ.. ಮತ್ತೆ ಆಗ್ಬೋದು ಹೇಳಿದ್ರು. ನಾನು ನಮ್ಮ ಮಗಳ ಆಸೆಯಂತೆ ನನ್ನ 25 ಇಂಚು ಕೂದಲನ್ನು ಬೆಂಗಳೂರು ಹೇರ್ ಡೊನೇಷನ್ ಅವರಿಗೆ ನನ್ನ 27ನೇ ವರ್ಷದ ಹುಟ್ಟು ಹಬ್ಬದ ದಿನ ದಾನ ಮಾಡಿದೆ ” ನಿಶಾ ಪ್ರಸಾದ್ ತಿಳಿಸಿದ್ದಾರೆ.
ಸುಬ್ರಹ್ಮಣ್ಯದ ದೇವರಗದ್ದೆಯ ಸುಬ್ರಹ್ಮಣ್ಯ ಭಟ್ ಹಾಗೂ ಜಯಂತಿ ಭಟ್ ಮಗಳಾದ ನಿಶಾ ಭಟ್ ಬೆಳ್ತಂಗಡಿಯ ಮಾಣೂರಿನ ಪ್ರಸಾದ್ ಅವರ ಪತ್ನಿ. ನಿಯತಿ ನೃತ್ಯ ನಿಕೇತನದ ನಿರ್ದೇಶಕಿ.