Breaking News

ಕೆ.ವಿ.ಜಿ. ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಗೆ ಮೇಲುಸ್ತುವಾರಿ ನಿರ್ದೇಶಕರಾಗಿ ಕೆ.ಆರ್. ಮನಮೋಹನ ಮತ್ತು ಎಸ್.ಆರ್ ಸೂರಯ್ಯ ನೇಮಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೆ.ವಿ.ಜಿ.ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇದರ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಮೇ. ೩೧ರಂದು ನಡೆಯಿತು. ಸಭೆಯಲ್ಲಿ ನಿರ್ಣಯಿಸಿಕೊಂಡಂತೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಕೆ.ಆರ್.ಮನಮೋಹನ ರವರನ್ನು ಕೆ.ವಿ.ಜಿ.ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಕುರುಂಜಿ ಭಾಗ್‌ನಲ್ಲಿರುವ ಮುಖ್ಯ ಕಛೇರಿಗೆ ಮೇಲುಸ್ತುವಾರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ಸಂಸ್ಥೆಯ ಸುಳ್ಯ ಶಾಖಾ ಕಛೇರಿಗೆ ಎಸ್.ಆರ್ ಸೂರಯ್ಯ ರವರನ್ನು ಮೇಲುಸ್ತುವಾರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು .


ಸಭೆಯ ನಿರ್ಣಯದಂತೆ ಕೆ.ವಿ.ಜಿ.ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ)ಯ ಅಭಿವೃದ್ಧಿಗಾಗಿ ಮುಂದಿನ ನೂತನ ಚಿಂತನೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಕೆ.ಆರ್ ಮನಮೋಹನ್, ಎಸ್.ಆರ್ ಸೂರಯ್ಯ, ಸಂತೋಷ್ ಕುತ್ತಮೊಟ್ಟೆ, ಜಯಪ್ರಕಾಶ್ ಕುಂಚಡ್ಕ, ಪಿ.ಎಸ್.ಗಂಗಾಧರ ಹಾಗೂ ಸಂತೋಷ್ ಜಾಕೆ ಇವರುಗಳನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಿಕೊಂಡು ಪ್ರಥಮ ಸಭೆಯನ್ನು ಆಡಳಿತ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರನ್ನು ಮತ್ತು ಮೇಲುಸ್ತುವಾರಿ ನಿರ್ದೇಶಕರನ್ನು ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ ಯವರು ಸನ್ಮಾನಿಸಿ ಗೌರವಿಸಿದರು. ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಸ್ವಯಂ ನಿವೃತ್ತಿ ಪಡೆದ ಆನಂದ ಖಂಡಿಗ ರವರನ್ನು ಕೂಡಾ ಸಂಸ್ಥೆಯ ಅಧ್ಯಕ್ಷರು ಸನ್ಮಾನಿಸಿ ಅವರನ್ನು ಪ್ರೀತಿಯಿಂದ ಬೀಳ್ಕೊಡಲಾಯಿತು. ಅವರ ಸ್ಥಾನಕ್ಕೆ ಅಂಕುಶ್ ಕುದ್ವ ರವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಡಾ.ಉಜ್ವಲ್ ಯು.ಜೆ ಯವರು ಶ್ರೀ ಆನಂದ ಖಂಡಿಗ ರವರು ಸಹಕಾರಿಯಲ್ಲಿ ಸಲ್ಲಿಸಿದ ಸೇವೆಯನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕಿಯವರಾದ ಡಾ.ಜ್ಯೋತಿ ಆರ್ ಪ್ರಸಾದ್, ಸಂಸ್ಥೆಯ ಉಪಾಧ್ಯಕ್ಷರಾದ ಚಿದಾನಂದ ಬಾಳಿಲ, ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಡಾ.ಉಜ್ವಲ್ ಯು.ಜೆ, ರಾಮಯ್ಯ ಗೌಡ ಕುರುಂಜಿ, ಶ್ರೀಮತಿ ನೇತ್ರಾವತಿ ಎಸ್.ಎನ್, ಶ್ರೀಮತಿ ಡಾ. ಮೇಘಶ್ರೀ, ಮಾಧವ ಬಿ.ಟಿ, ಪ್ರಸನ್ನ ಕುಮಾರ್ ಕಲ್ಲಾಜೆ, ಭವಾನಿ ಶಂಕರ ಅಡ್ತಲೆ, ಶಿವರಾಮ ಕೇರ್ಪಳ, ಪದ್ಮನಾಭ ಕಾನಾವುಜಾಲು, ನಾಗೇಶ್ ಕೊಚ್ಚಿ, ಬಾಲಸುಬ್ರಹ್ಮಣ್ಯ, ಮತ್ತು ಸಂಘದ ನೌಕರ ವೃಂದದವರು ಉಪಸ್ಥಿತರಿದ್ದರು. ಆರಂಭದಲ್ಲಿ ಸಂಘದ ನಿರ್ದೇಶಕರಾದ ಭವಾನಿಶಂಕರ ಅಡ್ತಲೆ ಸರ್ವರನ್ನೂ ಸ್ವಾಗತಿಸಿದರು. ಸಂಘದ ಹುಟ್ಟು ಬೆಳವಣಿಗೆಯ ಬಗ್ಗೆ ಸಂಘದ ಸ್ತಾಪಕಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಕೊನೆಗೆ ಉಪಾಧ್ಯಕ್ಷರಾದ ಚಿದಾನಂದ ಬಾಳಿಲ ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.