ನಿನ್ನೆ ನಿಧನರಾದ ಸುಬ್ರಹ್ಮಣ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ, ಉದ್ಯಮಿ ಮಂಜುನಾಥ ರಾವ್ ಅವರಿಗೆ ಸುಬ್ರಹ್ಮಣ್ಯ ಗ್ರಾ.ಪಂ ನ ಕುಮಾರಧಾರ ಸಭಾಂಗಣದಲ್ಲಿ ಸುಬ್ರಹ್ಮಣ್ಯ ಪತ್ರಕರ್ತರ ಸಂಘದ ವತಿಯಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಸುಬ್ರಹ್ಮಣ್ಯದ ಪ್ರಜಾವಾಣಿ ವರದಿಗಾರ ಲೊಕೇಶ್ ಬಿ.ಎನ್, ಸಂಯುಕ್ತ ಕರ್ನಾಟಕ ವರದಿಗಾರ ವಿಶ್ವನಾಥ ನಡುತೋಟ, ಭರತ್ ನೆಕ್ರಾಜೆ, ಉದಯವಾಣಿ ವರದಿಗಾರ ದಿನೇಶ್ ಕನ್ನಡ್ಕ, ವಿಜಯವಾಣಿ ವರದಿಗಾರ ರತ್ನಾಕರ,
ಸುಬ್ರಹ್ಮಣ್ಯ ಪತ್ರಕರ್ತರ ಸಂಘದ ಕಾರ್ಯದರ್ಶಿ, ವಿಜಯ ಕರ್ನಾಟಕ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ, ಸುದ್ದಿಬಿಡುಗಡೆಯ ಶಿವರಾಮ ಕಜೆಮೂಲೆ, ದೃಶ್ಯ ಮಾದ್ಯಮ ವರದಿಗಾರ ಶಿವ ಭಟ್ ಕಾಂಚನ, ಭುವನೇಶ್ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.