ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಾಳುಗೋಡಿನ ಬಸವನಗುಡಿಯಲ್ಲಿ ಜೂ. 1ರಂದು ಶುಭಾರಂಭಗೊಂಡಿತು. ಗ್ರಾ.ಪಂ ಉಪಾಧ್ಯಕ್ಷ ವಿಜಯ ಅಂಙಣ ದೀಪ ಬೆಳಗಿಸಿ ಉದ್ಘಾಟಿಸಿದರು.
ಹರಿಹರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ತ್ರಿಮೂರ್ತಿ, ಕಟ್ಟಡ ಮಾಲಿಕ ಲೊಕೇಶ್ ಕಟ್ಟೆಮನೆ, ಸುಮುದಾಯ ಆರೋಗ್ಯ ಅಧಿಕಾರಿ ಕು.ರೇಖಾ, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಕ ಬಸವರಾಜ್ ಚಕ್ರದ ಸ್ವಾಗತಿಸಿ, ವಂದಿಸಿದರು.