ಮುರುಳ್ಯಶಾಂತಿನಗರ ಶಾಲೆಯಲ್ಲಿ ಜೂ.01 ರಂದು SDMC ಮತ್ತು ಪೋಷಕರ ಶ್ರಮದಾನದಲ್ಲಿ ಶಾಲೆಯ ಪರಿಸರ ಸ್ವಚ್ಛಗೊಳಿಸಿ ಅಕ್ಷರ ತೋಟದಲ್ಲಿ ತರಕಾರಿ ಗಿಡ, ತರಕಾರಿ ಬೀಜ ಸಾಲು ಮಾಡಿ ಹಾಕಲಾಯಿತು. ಅಡಿಕೆ ತೋಟದ ಹುಲ್ಲು ಕಟ್ ಮಾಡಿ ಬುಡಕ್ಕೆ ರಸ ಗೊಬ್ಬರ ಹಾಕಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಇವರ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಸಹ ಶಿಕ್ಷಕಿಯಾರದ ಶ್ರೀಮತಿ ಸುಚಿತ , ಶ್ರೀಮತಿ ಸರಿತಾ , ಶ್ರೀಮತಿ ಶಾಲಿನಿ ಹಾಗೂ ಬಿಸಿ ಊಟ ಸಿಬ್ಬಂದಿಗಳು ಸಹಕರಿಸಿದರು.