ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳಿಗೆ ಮನವಿದಾರರಿಂದ ಗೌರವ
ಸುಳ್ಯ ನಗರದ ನಾವೂರು – ಬೋರುಗುಡ್ಡೆ ಪರಿಸರದ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ನ.ಪಂ. ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್ ಮತ್ತು ಊರವರಾದ ಸಿದ್ದೀಕ್ ಕೊಕ್ಕೊ ಮತ್ತಿತರರ ಮನವಿಗೆ ಮೆಸ್ಕಾಂ ಅಧಿಕಾರಿಗಳು ಸ್ಪಂದನೆ ನೀಡಿದ್ದಾರೆ.
ನಾವೂರು – ಬೋರುಗುಡ್ಡೆ ಪರಿಸರಕ್ಕೆ ಕೇರ್ಪಳ ಲೈನ್ ನಿಂದ ವಿದ್ಯುತ್ ಪೂರೈಕೆ ಮಾಡಬೇಕೆಂಬ ಮನವಿಗೆ ಅಧಿಕಾರಿಗಳು ಪೂರಕ ಸ್ಪಂದನೆ ಮಾಡಿದ್ದಲ್ಲದೆ, ಕೆಲಸವನ್ನೂ ಮಾಡಿ ಸಮಸ್ಯೆ ಪರಿಹರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಜೂ.3 ರಂದು ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ಹಾಗೂ ಅವರ ಬಳಗವನ್ನು ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಸಿದ್ದಿಕ್ ಕೊಕ್ಕೊ, ಹನೀಫ್ ಬೀಜಕೊಚ್ಚಿಕಚೇರಿಗೆ ತೆರಳಿ ಸನ್ಮಾನಿಸಿ, ಗೌರವಿಸಿದರು.