ಗಾಂಧೀನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ದತ್ತಿ ನಿಧಿ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧೀನಗರ ಸುಳ್ಯ ಪ್ರಾಥಮಿಕ ವಿಭಾಗದಲ್ಲಿ ದತ್ತಿ ನಿಧಿ ಕಾರ್ಯಕ್ರಮ ಜೂ.3 ರಂದು ನಡೆಯಿತು.

ಕಲಿಕೆ, ಕ್ರೀಡೆ ಮತ್ತು ಗುಣ ನಡತೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿರುವ ವಿದ್ಯಾರ್ಥಿಗಳಿಗೆ ನೀಡಲು ದತ್ತಿ ನಿಧಿ ಮತ್ತು ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ಹಲವಾರು ದಾನಿಗಳು ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಅದನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೆ.ಪಿ.ಎಸ್ ಪ್ರಾಥಮಿಕ ವಿಭಾಗದ ಅಧ್ಯಕ್ಷ ಆರ್.ಕೆ ಮಹಮ್ಮದ್ ವಹಿಸಿದ್ದರು.
ವೇದಿಕೆಯಲ್ಲಿ ಕೆ.ಪಿ.ಎಸ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್, ನಗರ ಪಂಚಾಯತ್ ಸದಸ್ಯೆ ಪ್ರವೀತಾ, ಪ್ರಭಾರ ಪ್ರಾಂಶುಪಾಲ ರಾಜೇಶ್, ಉಪ ಪ್ರಾಂಶುಪಾಲ ಅರುಣ್ ಕುಮಾರ್, ಸುಳ್ಯ ಸಿ.ಸಿ.ಅರ್ .ಟಿ ಬಳಗದ ಗೌರವ ಸಲಹೆಗಾರರಾದ ಸೇರ ಕೋಟಿಯಪ್ಪ ಪೂಜಾರಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎ.ಜಿ. ಭವಾನಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ.ಕೆ ರೈ, ನಿವೃತ್ತ ಶಿಕ್ಷಕಿ ಗಿರಿಜ ಎಂ.ವಿ.ಮೊದಲಾದವರಿದ್ದರು.

ಶಿಕ್ಷಕಿ ಪುಷ್ಪವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ದಮಯಂತಿ ಸ್ವಾಗತಿಸಿ, ಶಿಕ್ಷಕಿ ಜಯಶ್ರೀ ಧನ್ಯವಾದವಿತ್ತರು. ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.