ಚೆಂಬು ಊರುಬೈಲು ಸ.ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಜಯಂತಿ ಎಂ.ಎನ್.ರವರು ಮುಖ್ಯಶಿಕ್ಷಕಿಯಾಗಿ ಭಡ್ತಿ ಹೊಂದಿ ಚೆಂಬು ಶಾಲೆಗೆ ತೆರಳಿದ್ದು, ಅವರ ಬೀಳ್ಕೊಡುಗೆ ಕಾರ್ಯಕ್ರಮವು ಮೇ.28ರಂದು ನಡೆಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ, ವಾಸುದೇವ ನಿಡಿಂಜಿ, ರಾಘವ ಮಾರ್ಪಡ್ಕ, ಗ್ರಾ.ಪಂ.ಸದಸ್ಯರಾದ ವಸಂತ ನಿಡಿಂಜಿ, ರಮೇಶ, ಶ್ರೀಮತಿ ಜಯಂತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಸೋಮಣ್ಣ ಕೆ.ಆರ್. ಸ್ವಾಗತಿಸಿ, ವಿಕ್ರಾಂತ ಎಂ.ಬಿ. ನಿರೂಪಿಸಿದರು.