*
ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಭೆಯು ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಉದಯಗಣೇಶ ಅವರ ಅಧ್ಯಕ್ಷತೆಯಲ್ಲಿ ಜೂ.03 ರಂದು ನಡೆಯಿತು.
ಸಭೆಯಲ್ಲಿ ಶಾಲಾ ಮುಖ್ಯಮಂತ್ರಿ ಮಾಸ್ಟರ್ ಎ. ದುರ್ಗಾಕಶ್ಯಪ ಅವರು ಶಾಲೆಗೆ ಅಗತ್ಯತೆಯ ಕುರಿತು ಮನವಿ ಪತ್ರವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಪೋಷಕರಾದ ವಿಜಯ ಕುಮಾರ್ ಹಾಗೂ ವಸಂತ ಇವರು ಶಾಲೆಗೆ ಹಾರೆ, ಪಿಕ್ಕಾಸು ನೀಡುವುದಾಗಿ, ಎಸ್.ಡಿ.ಎಂ.ಸಿ .ಶ್ರೀಮತಿ ಪೂರ್ಣಿಮಾ ಉಮೇಶ್, ಶ್ರೀಮತಿ ವೀಣಾ, ಶ್ರೀಮತಿ ಚಿತ್ರ ಇವರು ನೀರಿನ ಪೈಪ್ ನೀಡುವುದಾಗಿ, ರಾಮಚಂದ್ರ ಕೊಡಿಬೈಲು ಇವರು 25 ಕೆಜಿ ರಸಗೊಬ್ಬರ, ಹಳೆ ವಿದ್ಯಾರ್ಥಿಯಾದ ಶಿವಚರಣ ಅರ್ನಾಡಿ ಇವರು ಒರೆಸುವ ಕೋಲು ನೀಡುವುದಾಗಿ ತಿಳಿಸಿದರು. ಪೋಷಕವೃಂದ ಹಾಗೂ ಎಸ್.ಡಿ.ಎಂ.ಸಿ.ಶಾಲಾ ಅಕ್ಷರ ಕೈ ತೋಟ ನಿರ್ಮಿಸಲು ಹಾಗೂ ಅತಿಥಿ ಶಿಕ್ಷಕರನ್ನು ನೇಮಿಸಲು ತಮ್ಮ ಕೊಡುಗೆಗಳನ್ನು ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್., ಶಿಕ್ಷಕವೃಂದ ಉಪಸ್ಥಿತರಿದ್ದರು.