ವಾಹನ ಅಪಘಾತವೊಂದರ ಪ್ರಕರಣದ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
೨೦೧೭ ಡಿ.೧ರಂದು ಕೆ.ಎ.೨೧ ಬಿ ೦೩೦೮ ಅಟೋ ರಿಕ್ಷಾ ವಾಹನದ ಚಾಲಕ ಜನಾರ್ದನ ನಾಯರ್ ಎಂಬವರು ಸುಳ್ಯ ಹಳೆಗೇಟಿನಲ್ಲಿ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಹಳೆಗೇಟು ಪರಿಸರದ ನಿವಾಸಿಗಳಾದ ಕೈರುನ್ನೀಸ, ಸಾಹಿದ ಹಾಗೂ ನೂರ್ ಜಹಾನ್ ಎಂಬವರಿಗೆ ಸಾಮಾನ್ಯ ಹಾಗೂ ತೀವ್ರ ಸ್ವರೂಪದ ಗಾಯ ಉಂಟು ಮಾಡಿದ ಆರೋಪದ ಕುರಿತು ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಹಿರಿಯ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.
ಈ ಕೇಸಿನ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರು ಪ್ರಾಸಿಕ್ಯೂಶನ್ ಆರೋಪಿಯ ಮೇಲಿನ ಆರೋಪವನ್ನು ಸಾಬೀತು ಪಡಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ಅಟೋ ರಿಕ್ಷಾ ವಾಹನದ ಚಾಲಕ ಜನಾರ್ಧನ ನಾಯರ್ ಎಂಬವರನ್ನು ಆಪಾದನೆಯಿಂದ ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆಟೋ ಚಾಲಕ ಜನಾರ್ಧನ್ ನಾಯರ್ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಪಿ.ಭಾಸ್ಕರ ರಾವ್ ಹಾಗೂ ಅಶ್ವಿನ್ ಕುಮಾರ್ ಪಿ ವಾದಿಸಿದ್ದರು.