ಬದ್ರಿಯಾ ಜುಮ್ಮಾ ಮಸೀದಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ (ರಿ)ಅರಂತೋಡು ಇವುಗಳ ಜಂಟಿ ಅಶ್ರಯದಲ್ಲಿ ಪವಿತ್ರ ಮಕ್ಕಾಕ್ಕೆ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಸುಳ್ಯ ತಾಲ್ಲೂಕಿನ ಎಕೈಕ ಪ್ರತಿನಿಧಿ ಅರಂತೋಡು ಜಮಾಅತ್ ಕೊಶಾಧಿಕಾರಿ ಹಾಗೂ ಸುಳ್ಯ ಪಟೇಲ್ ಮೆಡಿಕಲ್ಸ್ ಮಾಲಕ ಬದುರುದ್ದೀನ್ ಪಟೇಲ್ ರಿಗೆ ಬೀಳ್ಕೊಡುಗೆ ಸಮಾರಂಭ ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ಜಮಾಅತ್ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ವಹಿಸಿದ್ದರು .ಸ್ಥಳೀಯ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಬದುರುದ್ದೀನ್ ಪಟೇಲ್ ರನ್ನು ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು.ನುಸ್ರತುಲ್ ಇಸ್ಲಾಂ ಮದರಸ ಸದರ್ ಮಅಲ್ಲಿಂ ಸಹದ್ ಫೈಝಿ ನಿವೃತ್ತ ಉಪನ್ಯಾಸಕ ಅಬ್ದುಲ್ಲಾ ಮಾಸ್ಟರ್ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್ ಶುಭಾಂಶನೆಗೈದರು.ಜಮಾ ಅತ್ ಉಪಾಧ್ಯಕ್ಷ ಹಾಜಿ ಕೆ.ಎಮ್.ಮಹಮ್ಮದ್ ,ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಹಹರಿ,ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್,ಹಾಜಿ ಎಸ್.ಇ.ಮಹಮ್ಮದ್ ,ಅಬ್ದುಲ್ ಖಾದರ್ ಪಟೇಲ್,ಅರಂತೋಡು ಎಸ್ಕೆಎಸ್ಎಸ್ಎಫ್ ಶಾಖಾ ಅಧ್ಯಕ್ಷ ಅಶೀಕ್ ಕುಕ್ಕುಂಬಳ,ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಫಯಾಝ್ ಪಟೇಲ್,ಸೌದಿ ಸಮಿತಿಯ ಹಬೀಬ್ ಗುಂಡಿ,ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಆಮೀರ್ ಕುಕ್ಕುಂಬಳ,ಸಾಲಿಹ್ ಕೆ.ಎಮ್ ಮುಂತಾದವರು ಉಪಸ್ಥಿತರಿದ್ದರು .ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್ ಸ್ವಾಗತಿಸಿ ಎ.ಹೆಚ್.ವೈ ಎಸೋಸಿಯೆಶನ್ ಕಾರ್ಯದರ್ಶಿ ಫಸೀಲು ವಂದಿಸಿದರು.