Breaking News

ಕಲ್ಲುಮುಟ್ಲು : ಜಾಕ್ವೆಲ್ ನಿರ್ಮಾಣ ಸ್ಥಳದಲ್ಲಿ ಮತ್ತೆ ಮಣ್ಣು ಕುಸಿತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಣ್ಣು ಕುಸಿತ ತಡೆ ಕಾರ್ಯದಲ್ಲಿಯೇ ಸಮಯ ವಿನಿಯೋಗ

ಸುಳ್ಯ ನಗರದ ಜನತೆಗೆ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕಲ್ಲುಮುಟ್ಲು ಪಯಸ್ವಿನಿ ನದಿಯ ದಡದಲ್ಲಿ ಸುಮಾರು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾಕ್ವೆಲ್ ಕಾಮಗಾರಿಗೆ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿತ ಉಂಟಾಗುತ್ತಿದ್ದು, ಕೆಲಸ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದೆ.

ಕಳೆದ ಕೆಲವು ವಾರಗಳ ಹಿಂದೆ ಭಾರಿ ಮಳೆಗೆ ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಜಾಕ್ವೆಲ್ ನಿರ್ಮಾಣ ಸ್ಥಳದಲ್ಲಿ ನೀರು ತುಂಬಿ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿತ್ತು.

ಈ ಸಂದರ್ಭದಲ್ಲಿ ಸಚಿವ ಅಂಗಾರರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಇಂಜಿನಿಯರುಗಳಿಗೆ ಆದೇಶವನ್ನು ನೀಡಿದ್ದರು.

ಮತ್ತೆ ಮಳೆ ಕಡಿಮೆಯಾದ ನಂತರ ಮಣ್ಣು ಕುಸಿತ ಉಂಟಾದ ಸ್ಥಳದಲ್ಲಿ ತಾತ್ಕಾಲಿಕವಾಗಿ ತಡೆಗೋಡೆಯನ್ನು ನಿರ್ಮಿಸಿ ಮತ್ತೆ ಕಾಮಗಾರಿಯನ್ನು ಆರಂಭಿಸಿದರು.

 

ಇದೀಗ ನಿನ್ನೆ ಮಧ್ಯಾಹ್ನ ವೇಳೆಯಲ್ಲಿ ಮತ್ತೆ ಬರೆ ಕುಸಿತ ಉಂಟಾಗಿ ಕಾಮಗಾರಿಗೆ ಅಡ್ಡಿ ಉಂಟಾಗಿದೆ. ಸ್ಥಳದಲ್ಲಿ ಎ ಆರ್ ಡಬ್ಲ್ಯೂ ಪರಿಶೀಲನೆ ನಡೆಸುತ್ತಿದ್ದು ಮತ್ತೆ ತಡೆಗೋಡೆಯ ಕಾರ್ಯ ನಡೆಯುತ್ತಿದೆ.

ಈ ಪ್ರದೇಶದ ಮಣ್ಣು ಹೊಯಿಗೆ ಮಿಶ್ರಿತವಾಗಿದ್ದು ಮಣ್ಣಿನಲ್ಲಿ ತೇವಾಂಶ ಹೆಚ್ಚಾದಾಗ ಕುಸಿಯಲು ತೊಡಗುತ್ತದೆ. ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಬರುವ ಮಳೆಯ ಕಾರಣದಿಂದಾಗಿ ಈ ರೀತಿ ಸಂಭವಿಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮಳೆ ಬರುವ ಸಂದರ್ಭದಲ್ಲಿ ಜಾಕ್ವೆಲ್ ನಿರ್ಮಾಣ ಕಾರ್ಯ ಆರಂಭಿಸಿರುವುದು ಮಾತ್ರ ಸರಿಯಲ್ಲ ಎಂಬುದು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.