ಭಿಕ್ಷೆ ಬೇಡುತ್ತಲೇ ಆರು ಭಾಷೆಯ ನಂಟು ಬೆಳೆಸಿಕೊಂಡ ಕುಂಟ ಹಾಡುಗಾರ ಅರುಣ್
ಕಲೆ ಎಂಬುದು ಯಾರೊಬ್ಬರ ಸೊತ್ತಲ್ಲ. ದೇವರ ಅನುಗ್ರಹ ಹಾಗೂ ಸಾಧಿಸುವ ಛಲ ಇದ್ದರೆ ಕಲೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ.
ಕೆಲವು ಮಂದಿಗೆ ಎಲ್ಲವೂ ಸರಿಯಾಗಿದ್ದರೂ ಏನು ಮಾಡಲಾಗುವುದಿಲ್ಲಾ. ಆದರೆ ಇನ್ನೂ ಹಲವು ಮಂದಿಗೆ ಎಷ್ಟೇ ಸಮಸ್ಯೆ ಇದ್ದರೂ ಸಾಧಿಸಬೇಕು ಎಂಬ ಹಂಬಲದಿಂದ ಬದುಕನ್ನು ಕಟ್ಟಿಕೊಳ್ಳುವ ತುಡಿತ ಅವರಾದ್ದಾಗಿರುತ್ತದೆ. ಈ ಮಾತಿಗೆ ಪೂರಕವಾಗಿರುವ ವ್ಯಕ್ತಿ ಇಲ್ಲೊಬ್ಬರು ಕಾಣಸಿಗುತ್ತಾರೆ. ಯಾವುದೋ ಊರಿನಲ್ಲಿ ಹುಟ್ಟಿ ಬೆಳೆದು ತನ್ನಲ್ಲಿರುವ. ಕಲಾ ಶಕ್ತಿಯಿಂದ ಬದುಕು ನಡೆಸಲು ಬೇರೆ ಬೇರೆ ಊರಿನಲ್ಲಿ ಅಲೆದಾಡಿ ಬರುವ ಸಂಪಾದನೆಯಿಂದ ಜೀವನ ಸಾಗಿಸುತ್ತಿದ್ದಾರೆ.
ಈತನ ಹೆಸರು ಅರುಣ್ ,ಹುಟ್ಟಿದ್ದು ಪೂನಾದಲ್ಲಿ ಬೆಳೆದದ್ದು ಉಡುಪಿಯಲ್ಲಿ, ವೃತ್ತಿ ಎಂಬುದಿಲ್ಲ ಭಿಕ್ಷೆ ಬೇಡುತ್ತಾ ಜೀವನ, ತನ್ನ ಸುಶ್ರಾವ್ಯ ಕಂಠದಿಂದ ಒಬ್ಬ ಅಧ್ಭುತ ಹಾಡುಗಾರ, ಆರು ಭಾಷೆಗಳ ನಂಟುಹೊಂದಿರುವ ಈತ ಆಡು ಭಾಷೆ ಮರಾಠಿಯಾದರೂ ಹಿಂದಿ,ಕನ್ನಡ, ತಮಿಳು,ತೆಲುಗು, ಮಲಯಾಳಂ ಭಾಷೆಯಲ್ಲಿ ಮಾತನಾಡುವುದರೊಂದಿಗೆ ಹಾಡು ಹೇಳಿ ಮನರಂಜನೆ ನೀಡುತ್ತಾರೆ. ವಿಪರ್ಯಾಸವೆಂದರೆ ಹುಟ್ಟು ಅಂಗವಿಕಲನಾಗಿರುವ ಇವರು ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಕಾರಣದಿಂದ ಭಿಕ್ಷಾಟನೆಯನ್ನು ವೃತ್ತಿಯನ್ನಾಗಿಸಿಕೊಂಡಿರುತ್ತಾರೆ. ಒಂದು ಕಡೆ ಈ ವ್ಯಕ್ತಿಯ ಸ್ಥಿತಿಗತಿಯನ್ನು ನೋಡಿ ತಿಳಿದು ಹಾಗೂ ಇವರ ಮಧುರವಾದ ಹಾಡನ್ನು ಕೇಳಿ ಆನಂದಿಸಿದ ಊರಿನ ಜನರು ತನ್ನ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಕಳೆದ 16 ವರ್ಷಗಳಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗದ ಹಲವಾರು ಕಡೆಗಳಲ್ಲಿ ಸಂಚಾರ ನಡೆಸಿ ಜನರ ಸಂಪರ್ಕ ಹೊಂದಿರುತ್ತಾರೆ. ಸುಮಾರು 36 ವರ್ಷ ಪ್ರಾಯದ ಅರುಣ್ ವಿವಾಹಿತನಾಗಿದ್ದು ಓರ್ವ ಪುತ್ರನೊಂದಿಗೆ ಸಂಸಾರ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕುಕ್ಕುಜಡ್ಕ ಪೇಟೆಯಲ್ಲಿ ಸುತ್ತುವರಿದ ಜನರ ನಡುವೆ ಒಬ್ಬ ಕುಂಟ ಕೈಯಲ್ಲಿ
ಮೊಬೈಲ್ ಫೋನ್ ಹಿಡಿದು ಅದರಿಂದ ಬರುವ ಕರಾವೋಕೆ ಸಂಗೀತಕ್ಕೆ ಸಣ್ಣದಾದ ಮೈಕ್ ನಲ್ಲಿ ತನ್ನ ಮಧುರವಾದ ಧ್ವನಿ ಯಿಂದ ಹಾಡು ಹೇಳುತ್ತಿದ್ದ ಇದನ್ನು ಆಲಿಸಲು ಸುತ್ತುವರಿದ ಮಂದಿ ಹಾಡನ್ನು ಆಸ್ವಾದಿಸಿ ಹಣ ನೀಡಿ ಪ್ರೋತ್ಸಾಹಿಸಿದರು.
ಅರುಣ್ ರವರು ತನ್ನ ಅಂಗ ವೈಕಲ್ಯತೆಯನ್ನು ತಲೆಗೆ ಹಚ್ಚಿಕೊಳ್ಳದೆ ತನ್ನಲ್ಲಿರುವ ಆಸಕ್ತಿ ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಊರು ಊರು ಸುತ್ತಿಕೊಂಡು ಅಭಿಮಾನಿಗಳ ಪ್ರೀತಿಯ ಜತೆಗೆ ಜೀವನ ನಿರ್ವಹಣೆಗೆ ಸಂಪಾದಿಸುವ ದಾರಿ ಕಂಡುಕೊಂಡಿರುತ್ತಾರೆ. ತನ್ನ ಮಗನನ್ನು ಒಬ್ಬ ಹಾಡುಗಾರನನ್ನಾಗಿ ಮಾಡಬೇಕೆಂಬ ಮಹಾದಾಸೆ ಅರುಣ್ ರವರದ್ದು. ಏನೇ ಆಗಲಿ ಈತನ ಪರಿಸ್ಥಿತಿ ಯನ್ನು ನೋಡಿ ಮರುಗುವ ಮನಸ್ಸುಗಳು ಒಂದೆಡೆಯಾದರೆ, ಈತನ ಕನಸು, ಗುರಿ ಎರಡನ್ನೂ ಮೆಚ್ಚಿ ಕೈಲಾದಷ್ಟು ಸಹಕಾರ ನೀಡುವ ಮನಸ್ಸುಗಳು…