ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲ ಪಡಿಸುವ ಉದ್ದೇಶದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಜೂ.3 ರಂದಿ ಐನೆಕಿದುವಿನಲ್ಲಿ ಉದ್ಘಾಟಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲತಾ ಗುಂಡಡ್ಕ ದೀಪ ಬೆಳಗಿಸಿ ಉಧ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ॥ತ್ರಿಮೂರ್ತಿ ಅವರು ಮಾತನಾಡಿ
ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿ ಆರೋಗ್ಯ ಸೇವೆಗಳನ್ನು ಒದಗಿಸುವ ಕೇಂದ್ರ ಇದಾಗಿದ್ದು ಹಿರಿಯ ನಾಗರಿಕರು, ಬಾಣಂತಿಯರು ಚಿಕ್ಕ ಮಕ್ಕಳು ಮತ್ತು ಕ್ಯಾನ್ಸರ್ ಪೀಡಿತರು ಮತ್ತು ಹೊರ ರೋಗಿಗಳ ಆರೋಗ್ಯ ಸೇವೆಗಳು ಈ ಕೇಂದ್ರದಲ್ಲಿ ಲಭ್ಯವಿದೆ ಎಂದು ನುಡಿದರು.
ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು,
ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಗ್ರಾಮೀಣ ಭಾರತದ ಆರೋಗ್ಯ ಸೇವೆ ಒತ್ತು ನೀಡಿದ ಕಾರ್ಯ ಕ್ರಮ ಇದಾಗಿದೆ ಎಂದು ನುಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಯು.ಡಿ ಮಾತನಾಡಿ ಪ್ರತಿಯೊಂದು ಕುಟುಂಬಗಳು ಸಮುದಾಯ ಆರೋಗ್ಯಕೆಂದ್ರದ ಸೇವೆಯನ್ನು ಪಡೆದು ಕೊಳ್ಳಬೇಕೆಂದು ತಿಳಿಸಿ ಗ್ರಾಮೀಣ ಆರೋಗ್ಯದ ಗುರಿಗಳನ್ನು ಸಾಧಿಸುವ ಕ್ಷೇಮ ಚಟುವಟಿಕೆಗಳಲ್ಲಿ ಇಡೀ ಸಮದಾಯ ಪಾಲ್ಗೋಳ್ಳಬೇಕೆಂದರು.
ಸಮಾರಂಭದಲ್ಲಿ ಸ್ಥಳೀಯ ಸಹಕಾರಿ ದುರೀಣರಾದ ಕೂಜುಗೋಡು ಸೋಮಸುಂದರ ಗೌಡ , ಗ್ರಾ. ಪಂ. ಉಪಾಧ್ಯಕ್ಷೆ ಶ್ರೀಮತಿ ಸವಿತಾ, ಗ್ರಾ. ಪಂ. ಸದಸ್ಯರಾದ ಭಾರತಿ, ಗಿರೀಶ್ ಆಚಾರ್ಯ ಉಪಸ್ಥಿತರಿದ್ದರು. ಸ್ಥಳೀಯ
ಪ್ರಮುಖರು, ಆರೋಗ್ಯ ಅಂಗನವಾಡಿ ಸಿಬ್ಬಂಧಿಗಳು, ಆಶಾಕಾರ್ಯಕರ್ತೆಯರು ಸಾರ್ವಜನಿಕರು ಹಾಜರಿದ್ದರು.