ಪೆರುವಾಜೆ ಗ್ರಾಮ ಕಾಂಗ್ರೆಸ್ ಸಮಿತಿ ಇದರ ಮುರ್ಕೆತ್ತಿ ಬೂತ್ ಸಮಿತಿ ವತಿಯಿಂದ ಕಂಡಿಪ್ಪಾಡಿ,ಪೆರುವೋಡಿ, ದೇರ್ನಡ್ಕ,ಪೆಲತ್ತಡ್ಕ,ಕೋಡಿಯಡ್ಕ, ದುರ್ಗಾನಗರ ಸ್ಥಳಗಳಲ್ಲಿ ಒಟ್ಟು 8 ಸೋಲಾರ್ ಲೈಟ್ ಉದ್ಘಾಟನಾ ಕಾರ್ಯಕ್ರಮ ವನ್ನು ಕೆಪಿಸಿಸಿ ಸಂಯೋಜಕ ರಾದ ನಂದಕುಮಾರ್ ನೆರವೇರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯ ಅವರ ಅನುದಾನವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ .ಸಿ ಜಯರಾಮ ಅವರ ಶಿಫಾರಸಿನ ಮೇರೆಗೆ ಕೆಪಿಸಿಸಿ ಸಂಯೋಜಕ ರಾದ ನಂದಕುಮಾರ್ ಅವರು ಅನುದಾನ ತರಿಸುವುದರ ಮೂಲಕ ಸೋಲಾರ್ ಲೈಟ್ ಆಳವಡಿಕೆಗೆ ಸಹಕಾರ ನೀಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ .ಜಯರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅನುದಾನ ತರಿಸಲು ಕಾರಣಿಕರ್ತರಾದ ಸಚಿನ್ ರಾಜ್ ಶೆಟ್ಟಿ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ, ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಅನುಸೂಯ, ಪಂಚಾಯತ್ ಸದಸ್ಯರಾದ ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ, ಶ್ರೀಮತಿ ಗುಲಾಬಿ ಮುರ್ಕೆತ್ತಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ದುರ್ಗಾನಗರ, ಪ್ರಧಾನ ಕಾರ್ಯದರ್ಶಿ ಕರುಣಾಕರ ದುರ್ಗಾನಗರ, ಕಾರ್ಯದರ್ಶಿ ಕೇಶವ ದುರ್ಗಾ ನಗರ , ಕಂದಸ್ವಾಮಿ ಹಾಗೂ ಶೇಷಪ್ಪ ದೇರ್ನಡ್ಕ, ತಿಮ್ಮಪ್ಪ ದೇರ್ನಡ್ಕ, ಮುದ್ದ,ಬೆಳ್ತ,ಕುಜುಂಬ,ದೆಯ್ಯು, ಶ್ರೀ ಮತಿ ಕುಸುಮಾವತಿ, ಬಾಬು ಮತ್ತಿತರರು ಉಪಸ್ಥಿತರಿದ್ದರು.