ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಮೋಹಿನಿ ಅರಂಪಾಡಿಯವರು ಮೇ.31ರಂದು ಸೇವಾ ನಿವೃತ್ತಿ ಹೊಂದಿದರು.
ಇವರು ಅರಂತೋಡು, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಯನ್ನು ಸಲ್ಲಿಸಿದ್ದು ಬಳಿಕ ಕಾಣಿಯೂರಿನಲ್ಲಿ ತಮ್ಮ ಸೇವೆ ಮುಂದುವರಿಸಿದ್ದರು. ಒಟ್ಟು 26 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಮೋಹಿನಿ ಅವರು ಬಾಳುಗೋಡು ಗ್ರಾಮದ ಕಿರಿಭಾಗ ಮನೆತನದವರು. ಇವರ ಪತಿ ಈಶ್ವರ ಗೌಡ ಅರಂಪ್ಪಾಡಿ ನಿವೃತ್ತ ಯೋಧರು, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅರಸಿನಮಕ್ಕಿಯಲ್ಲಿ ಕ್ಯಾಶಿಯರ್ ಆಗಿದ್ದಾರೆ. ಮಕ್ಕಳು ಈಶ್ವರ ದೀಪಕ್ ಮತ್ತು ಈಶ್ವರ ಪ್ರತೀಕ್.