Breaking News

ಎಸ್.ಎಸ್.ಎಲ್.ಸಿ. ಸಾಧಕರಿಗೆ ಬೆಂಗಳೂರಿನ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರಿಂದ ನಗದು ಬಹುಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮೂಲತಃ ಜಾಲ್ಸೂರು ಗ್ರಾಮದ ಕನಕಮಜಲಿನವರಾಗಿದ್ದು,
ಬೆಂಗಳೂರಿನಲ್ಲಿ ಡೈರಿರಿಚ್ ಐಸ್ ಕ್ರೀಂ ಕಂಪನಿಯನ್ನು ಹೊಂದಿರುವ ಉದ್ಯಮಿ ಗಿರಿಯಪ್ಪ ಗೌಡ ಕಾಪಿಲರವರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 620 ಕ್ಕಿಂತ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳಿಗೆ ತಲಾ ರೂ. 10,000/ ದಂತೆ ನಗದು ಬಹುಮಾನವನ್ನು ಜೂ. 5ರಂದು ನೀಡಿ ಗೌರವಿಸಿದರು.

ಸುಳ್ಯದ ಸದರ್ನ್ ರೆಸಿಡೆನ್ಸಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಡ್ಡಪ್ಪ ಗೌಡ ಕಾಪಿಲ, ಶ್ರೀಮತಿ ಸೀತಾ ಗಿರಿಯಪ್ಪ ಗೌಡ ನಗದು ವಿತರಿಸಿ ಶುಭ ಹಾರೈಸಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಸುದ್ದಿ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿ ವಂದಿಸಿದರು. ಬಹುಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.